ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಲಿರುವ ಎಚ್ ಡಿಕೆ

First Published 24, May 2018, 9:43 AM IST
HDK Visits Siddaganga Mutt Tumkuru
Highlights

ನೂತನ ಸಿಎಂ ಕುಮಾರಸ್ವಾಮಿ ಇಂದು ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ  ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ.  ಇಂದು ಬೆಳಿಗ್ಗೆ 10 ಕ್ಕೆ ತುಮಕೂರು ವಿಶ್ವವಿದ್ಯಾಲಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ.  ಬಳಿಕ ರಸ್ತೆ ಮೂಲಕ ಸಿದ್ಧಗಂಗಾ ಮಠಕ್ಕೆ ತೆರಳಲಿದ್ದಾರೆ.  

ತುಮಕೂರು (ಮೇ. 24):  ನೂತನ ಸಿಎಂ ಕುಮಾರಸ್ವಾಮಿ ಇಂದು ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ  ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆಯಲಿದ್ದಾರೆ.  ಇಂದು ಬೆಳಿಗ್ಗೆ 10 ಕ್ಕೆ ತುಮಕೂರು ವಿಶ್ವವಿದ್ಯಾಲಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ.  ಬಳಿಕ ರಸ್ತೆ ಮೂಲಕ ಸಿದ್ಧಗಂಗಾ ಮಠಕ್ಕೆ ತೆರಳಲಿದ್ದಾರೆ. 

ಪ್ರಸಕ್ತ ರಾಜ್ಯದ ವಿದ್ಯಮಾನಗಳ ಬಗ್ಗೆ ಶ್ರೀಗಳ ಜೊತೆ ಚರ್ಚೆ ನಡೆಸಲಿದ್ದಾರೆ.  11 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.  ಎಚ್ಡಿಕೆ ಬಂದು ಹೋಗುವವರೆಗೂ ಭಕ್ತರಿಗೆ  ಪ್ರವೇಶ ನಿರ್ಬಂಧ ಹೇರಲಾಗಿದೆ.  ಸಿದ್ಧಗಂಗಾ ಮಠದಲ್ಲಿ  ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 280 ಪೊಲೀಸ್ ಕಾನ್ ಸ್ಟೇಬಲ್, 20 ಎಸ್ ಐ, 9 ಸಿಪಿಐ, 3 ಡಿಎಸ್ ಪಿ ನಿಯೋಜನೆ ಮಾಡಲಾಗಿದೆ.   

loader