ಕುಮಾರಸ್ವಾಮಿಯ ಋಣ ತೀರಿಸಲು ವಿಕಲಚೇತನ ಮಹಿಳೆಯೊಬ್ಬರು ಮುಂದಾಗಿದ್ದಾರೆ.  ಕುಮಾರಸ್ವಾಮಿ ಸಿಎಂ ಆದರೆ ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲೇ ಹತ್ತುತ್ತೇನೆಂದು ವಿಕಲಚೇತನ ಮಹಿಳೆ ಚೇತನ ತಾಯಿ ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದಾರೆ.  

ಬೆಂಗಳೂರು (ಮೇ. 20):  ಕುಮಾರಸ್ವಾಮಿಯ ಋಣ ತೀರಿಸಲು ವಿಕಲಚೇತನ ಮಹಿಳೆಯೊಬ್ಬರು ಮುಂದಾಗಿದ್ದಾರೆ. 

ಕುಮಾರಸ್ವಾಮಿ ಸಿಎಂ ಆದರೆ ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲೇ ಹತ್ತುತ್ತೇನೆಂದು ವಿಕಲಚೇತನ ಮಹಿಳೆ ಚೇತನ ತಾಯಿ ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದಾರೆ. 

2006 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನದ ವೇಳೆ ಚೇತನಾ ಎಂಬ ವಿಕಲ ಚೇತನ ಮಹಿಳೆಗೆ ಮೆಟ್ರೋ ನಿಗಮದಲ್ಲಿ ಸರ್ಕಾರಿ ನೌಕರಿ ಕೊಡಿಸಿದ್ದರು. ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನಲೆಯಲ್ಲಿ ಚೇತನಾ ಎಚ್ ಡಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಪ್ರಮಾಣ ವಚನ ಆಗುತ್ತಿದ್ದಂತೆ ಚೇತನಾ ಚಾಮುಂಡಿ ಬೆಟ್ಟ ಏರಲಿದ್ದಾರೆ.