ಚುನಾವಣೆ ಮುಗಿಸಿ ಕುಮಾರಸ್ವಾಮಿ ಸಿಂಗಾಪುರಕ್ಕೆ ಹಾರಿದ್ದಾರೆ.  ಚುನಾವಣೆ ಪ್ರಚಾರದಲ್ಲಿ ಅವಿರತವಾಗಿ ತೊಡಗಿದ್ದರು. ಪ್ರತಿಯೊಂದು ಹಳ್ಳಿಗೂ ಹೋಗಿ ಪ್ರಚಾರ ನಡೆಸಿದ್ದರು.

ಬೆಂಗಳೂರು (ಮೇ. 13): ಚುನಾವಣೆ ಮುಗಿಸಿ ಕುಮಾರಸ್ವಾಮಿ, ಪುತ್ರನ ಜೊತೆ ಸಿಂಗಾಪುರಕ್ಕೆ ಹಾರಿದ್ದಾರೆ.

ಚುನಾವಣೆ ಪ್ರಚಾರದಲ್ಲಿ ಅವಿರತವಾಗಿ ತೊಡಗಿದ್ದರು. ಪ್ರತಿಯೊಂದು ಹಳ್ಳಿಗೂ ಹೋಗಿ ಪ್ರಚಾರ ನಡೆಸಿದ್ದರು. ಹಗಲು, ರಾತ್ರಿಯನ್ನೂ ಲೆಕ್ಕಿಸದೇ ಓಡಾಡಿದ್ದರು. ಹೀಗಾಗಿ ಪ್ರಚಾರದ ಕೊನೆ ದಿನಗಳಲ್ಲಿ ಸುಸ್ತಾಗಿದ್ದರು. ಹೀಗಾಗಿ ಎರಡು ದಿನ ವಿಶ್ರಾಂತಿಗಾಗಿ ಪುತ್ರನ ಜೊತೆ ಸಿಂಗಾಪೂರಕ್ಕೆ ಹಾರಿದ್ದಾರೆ. 

ನಾಳೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.