ವಿಧಾನಸೌಧದ ಕಡೆ ಹೋಗುತ್ತೀರಾ ಎಚ್ಚರ

HD Kumaraswamy to take oath today
Highlights

ವಿಧಾನಸೌಧ ಮುಂಭಾಗ ಸಂಜೆ 4.30 ಕ್ಕೆ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಿನ್ನೆಲೆಯಲ್ಲಿ ನಗರದ ಒಳ ಮತ್ತುಹೊರ ಭಾಗದ ಬಹುತೇಕ ರಸ್ತೆ ಗಳಲ್ಲಿ ಬುಧವಾರ ಸಂಚಾರ ದಟ್ಟಣೆ ಉಂಟಾಗಬಹುದು.

ಬೆಂಗಳೂರು : ವಿಧಾನಸೌಧ ಮುಂಭಾಗ ಸಂಜೆ 4.30 ಕ್ಕೆ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಿನ್ನೆಲೆಯಲ್ಲಿ ನಗರದ ಒಳ ಮತ್ತುಹೊರ ಭಾಗದ ಬಹುತೇಕ ರಸ್ತೆ ಗಳಲ್ಲಿ ಬುಧವಾರ ಸಂಚಾರ ದಟ್ಟಣೆ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ನಾಗರಿಕರು ಜಾಗ್ರತೆವಹಿಸಬೇಕಿದ್ದು, ಸಂಜೆ ೪ರ ನಂತರ ಮುಖ್ಯ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಈ ಸಮಾರಂಭದಲ್ಲಿ ಕೋಲಾರ, ಮೈಸೂರು, ರಾಮನಗರ ಹಾಗೂ ತುಮಕೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿದ್ದಾರೆ. ಹೀಗಾಗಿ ರಾಜಧಾನಿ ಸೇರುವ ಪ್ರಮುಖ ಹೆದ್ದಾರಿಗಳಾದ ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಹಾಗೂ ಕನಕಪುರ ರಸ್ತೆಗಳಲ್ಲಿ ಸಹ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಪೊಲೀಸರು ಹೇಳಿದ್ದಾರೆ.

ಸಮಾರಂಭಕ್ಕೆ ರಾಜ್ಯದ ವಿವಿಧೆಡೆಯಿಂದ ಸುಮಾರು 2500 ವಾಹನಗಳಲ್ಲಿ ಜನರು ಆಗಮಿಸುವ ಬಗ್ಗೆ ಮಾಹಿತಿ ಇದೆ. ಇದರಿಂದ ನಗರದ ವ್ಯಾಪ್ತಿ ಸಂಚಾರ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗಿದ್ದು, ಸಂಚಾರ ನಿರ್ವಹಣೆಗೆ 3500 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ವಿವರಿಸಿದರು.


ಇಲ್ಲಿ ವಾಹನ ನಿಲುಗಡೆ ನಿಷೇಧ

ಡಾ.ಬಿ.ಅರ್.ಅಂಬೇಡ್ಕರ್
ರಸ್ತೆ, ರಾಜಭವನ, ಕ್ವೀನ್ಸ್

ಶೇಷಾದ್ರಿ, ಅರಮನೆ

ದೇವರಾಜ ಅರಸ್

ಕಬ್ಬನ್ ಉದ್ಯಾನದ

ಒಳಭಾಗದ ರಸ್ತೆಗಳು

ಮಿಲ್ಲರ್ ರಸ್ತೆ

ಇನ್‌ಫೆಂಟ್ರಿ ರಸ್ತೆ

ಅಲಿ ಅಸ್ಗರ್ ರಸ್ತೆ, ಕೆ.ಜಿ.ರಸ್ತೆ

ನೃಪತುಂಗ, ಹಳೇ ಅಂಚೆ

ಕಚೇರಿ, ಪಿ.ಕಾಳಿಂಗರಾವ್,
ಕಸ್ತೂರಿ ಬಾ
ಮಲ್ಯ ಆಸ್ಪತ್ರೆ, ಟಿ.

ಚೌಡಯ್ಯ, ರಮಣ
ಮಹರ್ಷಿ

ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ, ಹಡ್ಸನ್ ವೃತ್ತ ಹಾಗೂ ಅನಿಲ್ ಕುಂಬ್ಳೆ ವೃತ್ತ ಸೇರಿದಂತೆ ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

loader