ರಾಮನಗರ : ರಾಮನಗರ ತಾಲೂಕಿನ ಎರಡು ಮತ್ತು ಕನಕಪುರ ತಾಲೂಕಿನ ಎರಡು ಹೋಬಳಿಗಳನ್ನು ಒಳಗೊಂಡಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 

ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಬಿಜೆಪಿಯಿಂದ ಲೀಲಾವತಿ ಕಣದಲ್ಲಿದ್ದಾರೆ. ಜೆಡಿಎಸ್‌ಗೆ ಸಂಘಟನೆ ಬಲ ಇದೆಯಾದರೂ ಕುಮಾರಸ್ವಾಮಿ ಬಗ್ಗೆ ಮತದಾರರಲ್ಲಿ ಅಲ್ಪ ಬೇಸರವೂ ಇದೆ. 

ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾರೋಹಳ್ಳಿ ಮತ್ತು ಮರಳವಾಡಿಯಲ್ಲಿ ಇಂಧನ ಸಚಿವ ಡಿಕೆಶಿ ಸಹೋದರರು ತಮ್ಮ ಕರಾಮತ್ತು ಪ್ರದರ್ಶಿಸಿ ಒಕ್ಕಲಿಗರ ಮತಗಳನ್ನು ವಿಭಜಿಸಿದರೆ,  ದಲಿತರು ಮತ್ತು ಅಲ್ಪಸಂಖ್ಯಾತ ಮತಗಳು ಒಗ್ಗಟ್ಟು ಪ್ರದರ್ಶಿಸಿದರೆ ಇಕ್ಬಾಲ್‌ಗೆ ಅನುಕೂಲವಾಗುತ್ತದೆ. ಆದರೆ ಒಕ್ಕಲಿಗರು ಕೈ ಹಿಡಿದರೆ ಕುಮಾರಸ್ವಾಮಿಗೆ ಹಾದಿ ಸುಗಮವಾಗುತ್ತದೆ.