ಕಲಬುರಗಿ : ಕರ್ನಾಟಕದಲ್ಲಿ ಒಂದೆಡೆ ಚುನಾವಣಾ ಕಾವು ಹೆಚ್ಚಾಗಿದ್ದು, ನಾಯಕರ ನಡುವಿನ ವಾಕ್ಸಮರ ನಿರಂತರವಾಗಿದೆ. ಈ ನಡುವೆ ರಾಜ್ಯಕ್ಕೆ ಆಗಮಿಸಿರುವ ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಕಲಬುರಗಿಗೆ  ಆಗಮಿಸಿದ್ದ  ಶಾಸಕ ಜಿಗ್ನೇಶ್ ಮೇವಾನಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಪ್ರಧಾನಿ ಮೋದಿಯಂತಹ ಭ್ರಷ್ಟಾಚಾರಿ ದೇಶದಲ್ಲಿ ಮತ್ತೊಬ್ಬರಿಲ್ಲ. 20 ವರ್ಷಗಳಿಂದ ನೋಡಿ ನಾನು ಈ ಮಾತು ಹೇಳುತ್ತಿದ್ದೇನೆ. ಅಂಬಾನಿ ಅದಾನಿಯವರಿಗೆ ಅನುಕೂಲ ಮಾಡುವುದೇ ಪ್ರಧಾನಿ ಮೋದಿ ಕೆಲಸವಾಗಿದೆ ಎಂದು ಹೇಳಿದ್ದಾರೆ. 

ಕರ್ನಾಟಕ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ನಡೆಯುವುದಿಲ್ಲ. ನಾನು ಯಾವ ಪಕ್ಷದ ಪರವೂ ಪ್ರಚಾರ ಮಾಡುತ್ತಿಲ್ಲ. ಜನತೆಯ ಪರವಾಗಿ ನನ್ನ ನಿರಂತರವಾದ  ಹೋರಾಟ ನಡೆಯುತ್ತದೆ ಎಂದು ಹೇಳಿದ್ದಾರೆ. 

ಇನ್ನು  ಬಿಜೆಪಿ ಸಂವಿಧಾನ ಬದಲಾವಣೆಗೆ ಯತ್ನಿಸುತ್ತಿದೆ ಎಂದಿರುವ ಅವರು, ಅದಕ್ಕೆ ಅವಕಾಶ ನೀಡುವುದಿಲ್ಲ. ಸಂವಿಧಾನ ರಕ್ಷಣೆಗೆ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದ್ದಾರೆ.

ಮತದಾನ ನಿಮ್ಮ ಹಕ್ಕು - ತಪ್ಪದೇ ಬಂದು ಮತ ಚಲಾಯಿಸಿ : ಮೇ 12