Asianet Suvarna News Asianet Suvarna News

ಬೋಪಯ್ಯ ನೇಮಕದಲ್ಲೂ ಬಿಜೆಪಿ ಮಾಸ್ಟರ್ ಪ್ಲ್ಯಾನ್

ಸದ್ಯಕ್ಕೆ ಶಾಸಕರ ಅನರ್ಹಗೊಳಿಸುವ ಅಧಿಕಾರ ಹಂಗಾಮಿ ಸ್ಪೀಕರ್  ಅವರಿಗಿಲ್ಲ. 14ನೇ ವಿಧಾನಸಭೆ ನಡಾವಳಿಗಳು ಆ ವಿಧಾನಸಭೆಗಷ್ಟೇ ಸೀಮಿತ. ಮುಂದಿನ ವಿಧಾನಸಭೆಗೆ ನಡಾವಳಿಗಳನ್ನು ಮುಂದುವರಿಸಲು ಆಗುವುದಿಲ್ಲ ಎಂದು ಸುವರ್ಣ ನ್ಯೂಸ್'ಗೆ  ವಿಧಾನಸಭೆ ಸಚಿವಾಲಯಗಳ ಮಾಹಿತಿ ನೀಡಿವೆ.

Governor appoints BJP MLA KG Bopaiah as pro tem speaker Congress slams

ಬೆಂಗಳೂರು(ಮೇ.18):  ಹಂಗಾಮಿ ಸ್ಪೀಕರ್ ಆಗಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರಿಂ ಕೋರ್ಟ್'ಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಆಯ್ಕೆಯಾದ 222 ಶಾಸಕರಲ್ಲಿ ಅತ್ಯಂತ ಹಿರಿಯರಾದ ಹಾಗೂ ಹೆಚ್ಚು ಬಾರಿ ಶಾಸಕರಾದವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವುದು ನಿಯಮವಾಗಿದೆ. ಆದರೆ ಕಾಂಗ್ರೆಸ್ ನಿಯಮ ಉಲ್ಲಂಘಿಸಿ ಬೋಪಯ್ಯ ಅವರನ್ನು ನೇಮಿಸಿದೆ ಎಂದು ಸುಪ್ರಿಂ ಕೋರ್ಟ್ ಕದ ತಟ್ಟಲು ಕಾಂಗ್ರೆಸ್ ಯೋಜಿಸುತ್ತಿದೆ.  ಈ ಬಗ್ಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೂ ದೂರು ಸಲ್ಲಿಸುವ ಸಾಧ್ಯತೆಯಿದೆ.
ಅನರ್ಹಗೊಳಿಸಲು ಸಾಧ್ಯವಿಲ್ಲ
ಕಳೆದ ವಿಧಾನ ಸಭೆಯಲ್ಲಿ ಬಂಡಾಯವೆದ್ದಿದ್ದ ಮೂವರು ಬಂಡಾಯ ಶಾಸಕರನ್ನು ಬೋಪಯ್ಯ ಅವರು ಅನರ್ಹಗೊಳಿಸುತ್ತಾರೆ ಎಂಬ ಸುದ್ದಿ ಹರಡಿದ ಹಿನ್ನಲೆಯಲ್ಲಿ,  3 ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಹಂಗಾಮಿ ಸ್ಪೀಕರ್ ಅವರಿಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವಿಲ್ಲ. ಸದ್ಯಕ್ಕೆ ಶಾಸಕರ ಅನರ್ಹಗೊಳಿಸುವ ಅಧಿಕಾರ ಹಂಗಾಮಿ ಸ್ಪೀಕರ್  ಅವರಿಗಿಲ್ಲ. 14ನೇ ವಿಧಾನಸಭೆ ನಡಾವಳಿಗಳು ಆ ವಿಧಾನಸಭೆಗಷ್ಟೇ ಸೀಮಿತ. ಮುಂದಿನ ವಿಧಾನಸಭೆಗೆ ನಡಾವಳಿಗಳನ್ನು ಮುಂದುವರಿಸಲು ಆಗುವುದಿಲ್ಲ ಎಂದು ಸುವರ್ಣ ನ್ಯೂಸ್'ಗೆ  ವಿಧಾನಸಭೆ ಸಚಿವಾಲಯಗಳ ಮಾಹಿತಿ ನೀಡಿವೆ.
ಕಾನೂನು ಉಲ್ಲಂಘನೆಯಿಲ್ಲ
ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ನೇಮಕ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸ್ಪಷ್ಟನೆ ನೀಡಿದ್ದಾರೆ. 
2008ರಲ್ಲೂ ಬೋಪಯ್ಯ ಸ್ಪೀಕರ್ ಆಗಿ ನೇಮಕವಾಗಿದ್ದು, ಆಗ ಬೋಪಯ್ಯ 10 ವರ್ಷ ಕಿರಿಯ ಸದಸ್ಯರಾಗಿದ್ದರು. ಕಾಂಗ್ರೆಸ್ ಈಗ ಅನಗತ್ಯ ಆಕ್ಷೇಪಣೆ ಎತ್ತುತ್ತಿದೆ. ಬೋಪಯ್ಯ ನೇಮಕ ನ್ಯಾಯಸಮ್ಮತ ಮತ್ತು ಕಾನೂನು ಬದ್ಧ.ಹಂಗಾಮಿ ಸ್ಪೀಕರ್ ನೇಮಕ ಮಾಡುವುದು ರಾಜ್ಯಪಾಲರ ಅಧಿಕಾರವಾಗಿದ್ದು ಸಂವಿಧಾನದ ವಿಧಿ 95(1) ಮತ್ತು 180(1) ಅಡಿಯಲ್ಲಿ ಅಧಿಕಾರವಿದೆ. ಹಂಗಾಮಿ ಸ್ಪೀಕರ್ ನೇಮಕದಲ್ಲಿ ಸಂಪ್ರದಾಯದ ನಿರ್ಬಂಧವಿಲ್ಲ ಎಂದು ಟ್ವಿಟರ್'ನಲ್ಲಿ ತಿಳಿಸಿದ್ದಾರೆ.

 

Follow Us:
Download App:
  • android
  • ios