ದೇವೇಗೌಡರ ನಿರ್ಧಾರದ ಮೇಲೆ ನಿಂತಿದೆ ರಾಜ್ಯ ರಾಜಕಾರಣ

Government form depend upon Deve Gowda's Decision
Highlights

ಬಹುಮತದತ್ತ ಸಾಗಿದ ಬಿಜೆಪಿ ಕೊನೆ ಗಳಿಗೆಯಲ್ಲಿ ಬಹಮತದಿಂದ ಕೇವಲ 9 ಮತಗಳಿಂದ ಹಿಂದೆ ಉಳಿದಿದೆ. ಸ್ವತಂತ್ರ ಸರ್ಕಾರ ರಚಿಸುವ ವಿಶ್ವಾಸದಿಂದ ನಿರಾಸೆಗೊಂಡಿದ್ದಾರೆ. ಅತ್ತ 77 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡ ಕಾಂಗ್ರೆಸ್ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಲು ಸರ್ಕಸ್ ನಡೆಸುತ್ತಿದೆ. ಕಾಂಗ್ರೆಸ್ ನಿಯೋಗ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಜೆಡಿಎಸ್ ಗೆ ಬೇಷರತ್ ಬೆಂಬಲ ಸೂಚಿಸಲು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ದೇವೇಗೌಡರು ಯಾವುದೇ ನಿರ್ಧಾರವನ್ನು ಇನ್ನು ತಿಳಿಸಿಲ್ಲ. 

ಬೆಂಗಳೂರು (ಮೇ. 15): ಬಹುಮತದತ್ತ ಸಾಗಿದ ಬಿಜೆಪಿ ಕೊನೆ ಗಳಿಗೆಯಲ್ಲಿ ಬಹಮತದಿಂದ ಕೇವಲ 9 ಮತಗಳಿಂದ ಹಿಂದೆ ಉಳಿದಿದೆ. ಸ್ವತಂತ್ರ ಸರ್ಕಾರ ರಚಿಸುವ ವಿಶ್ವಾಸದಿಂದ ನಿರಾಸೆಗೊಂಡಿದ್ದಾರೆ.

ಅತ್ತ 77 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡ ಕಾಂಗ್ರೆಸ್ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಲು ಸರ್ಕಸ್ ನಡೆಸುತ್ತಿದೆ. ಕಾಂಗ್ರೆಸ್ ನಿಯೋಗ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಜೆಡಿಎಸ್ ಗೆ ಬೇಷರತ್ ಬೆಂಬಲ ಸೂಚಿಸಲು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ದೇವೇಗೌಡರು ಯಾವುದೇ ನಿರ್ಧಾರವನ್ನು ಇನ್ನು ತಿಳಿಸಿಲ್ಲ. 

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಿಜೆಪಿಗೆ ದೊಡ್ಡ ತಲೆ ನೋವಾಗಿದೆ. ಬಿಜೆಪಿ ಮುಖಂಡ ಆರ್ ಅಶೋಕ್ ಕೂಡಾ ದೇವೇಗೌಡರ ಮನೆಗೆ ದೌಡಾಯಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಎಸ್ ವೈ ಜೊತೆ ಚರ್ಚೆ ನಡೆಸಿದ್ದಾರೆ. 

ಕಾಂಗ್ರೆಸ್ ಜೊತೆ ಕೈ ಜೋಡಿಸುವ ಮುನ್ನ ನಮ್ಮೊಂದಿಗೆ ಮಾತನಾಡಿ ಎಂದು ಬಿಜೆಪಿ ಹೇಳಿದೆ. ನಮ್ಮ ಜೊತೆ ಮಾತುಕತೆ ಇಷ್ಟವಾಗದಿದ್ರೆ ಮಾತ್ರ ನಿಮ್ಮ ನಿರ್ಧಾರ ಕೈಗೊಳ್ಳಬಹುದು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದು ಒಳಿತು. ಕೇಂದ್ರದ ನೆರವಿಲ್ಲದೇ ಅಭಿವೃದ್ದಿ ಮಾಡುವುದು ಕಷ್ಟವೆಂದು ಗೊತ್ತಿದೆ. ನಿಮಗೆ ಗೊತ್ತಿದೆ ಎಂದು ನಾವು ಬಾವಿಸುತ್ತೇವೆ ಎಂದು ಬಿಜೆಪಿ ವರಿಷ್ಟರು ಸೂಚನೆ ನೀಡಿದ್ದಾರೆ. 

ದೇವೇಗೌಡರ ನಿರ್ಧಾರದ ಮೇಲೆ ರಾಜ್ಯ ರಾಜಕಾರಣ ನಿಂತಿದೆ. 

loader