ಎರಡನೇ ಬಾರಿಗೆ ಶಾಸಕ ಮಂಜುನಾಥ್'ಗೆ ಹುಣಸೂರು ತಾಲೂಕಿನ ಬೂಚಹಳ್ಳಿ ಗ್ರಾಮಸ್ಥರು ಘೆರಾವ್ ಹಾಕಿದ್ದಾರೆ.
ಬೆಂಗಳೂರು (ಮೇ. 02): ಎರಡನೇ ಬಾರಿಗೆ ಶಾಸಕ ಮಂಜುನಾಥ್'ಗೆ ಹುಣಸೂರು ತಾಲೂಕಿನ ಬೂಚಹಳ್ಳಿ ಗ್ರಾಮಸ್ಥರು ಘೆರಾವ್ ಹಾಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹುಣಸೂರು ತಾಲೂಕಿನ ಬೂಚಹಳ್ಳಿ ಗ್ರಾಮದಲ್ಲಿ ಮತಯಾಚನೆಗೆ ತೆರಳಿದ್ದಾಗ ಶಾಸಕರನ್ನು ಗ್ರಾಮದ ಒಳಗೆ ಸೇರಿಸದೇ ಘೇರಾವ್ ಹಾಕಿದ್ದಾರೆ. ಶಾಸಕರ ಎದುರಲ್ಲೇ ಜೆಡಿಎಸ್ ಗೆ ಜೈಕಾರ ಹಾಕಿದ್ದಾರೆ.
ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೆಗೌಡ ಅವರಿಗೆ ಜೈಕಾರ ಕೂಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸಹ ಶಾಸಕರಿಗೆ ಘೆರಾವ್ ಹಾಕಿದ್ರು. ಈ ವೇಳೆ ವ್ಯಕ್ತಿಯೊರ್ವನನ್ನು ಕತ್ತಿನ ಪಟ್ಟಿ ಹಿಡಿದು ಶಾಸಕ ತಳ್ಳಿದ್ದರು. ಇಂದು ಸಹ ಇದೇ ಘಟನೆ ಮರುಕಳಿಸಿದೆ.
