ಕರ್ನಾಟಕ ಚುನಾವಣೆ: ಗದಗದಲ್ಲಿ ಕೈಗೆ ಗುದ್ದು ನೀಡಿ ಅರಳಿದ ಕಮಲ

karnataka-assembly-election-2018 | Tuesday, May 15th, 2018
Sayed Isthiyakh
Highlights

ಕರ್ನಾಟಕ ವಿಧಾನಸಭೆಗೆ ಕಳೆದ ಮೇ. 12ರಂದು ನಡೆದ ಚುನಾವಣೆಗಳ ಫಲಿತಾಂಶ ಇಂದು ಹೊರಬಂದಿದ್ದು, ಕಾಂಗ್ರೆಸ್ ಭದ್ರಕೋಟೆಯಾದ ಗದಗದಲ್ಲಿ ಬಿಜೆಪಿಯ ಕಮಲ ಅರಳಿದೆ. ಗದಗ ಜಿಲ್ಲೆಯ 4 ವಿಧಾನಸಭಾ ಸ್ಥಾನಗಳ ಪೈಕಿ 3ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಬೆಂಗಳೂರು [ಮೇ.15]:  ಕರ್ನಾಟಕ ವಿಧಾನಸಭೆಗೆ ಕಳೆದ ಮೇ. 12ರಂದು ನಡೆದ ಚುನಾವಣೆಗಳ ಫಲಿತಾಂಶ ಇಂದು ಹೊರಬಂದಿದ್ದು, ಕಾಂಗ್ರೆಸ್ ಭದ್ರಕೋಟೆಯಾದ ಗದಗದಲ್ಲಿ ಬಿಜೆಪಿಯ ಕಮಲ ಅರಳಿದೆ. ಗದಗ ಜಿಲ್ಲೆಯ 4 ವಿಧಾನಸಭಾ ಸ್ಥಾನಗಳ ಪೈಕಿ 3ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

2013ರ ವಿಧಾನಸಬಾ ಚುನಾವಣೆಯಲ್ಲಿ ಎಲ್ಲಾ 4 ಸ್ಥಾನಗಳಲ್ಲಿ ಜಯಭೆರಿ ಬಾರಿಸಿದ್ದ ಕಾಂಗ್ರೆಸ್ ಈ ಬಾರಿ ಕೇವಲ 1 ಸ್ಥಾನವನ್ನು ಗಳಿಸುವಲ್ಲಿ ಸಫಲವಾಗಿದೆ. ಕಳೆದ ಬಾರಿ ಸುಮಾರು 33 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದ ಗ್ರಾಮೀಆಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಗದಗ ಕ್ಷೇತ್ರದಿಂದ ಬಹಳ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕ್ಷೇತ್ರ ಗೆಲುವು ಪಕ್ಷ ವೋಟು ಸೋಲು ಪಕ್ಷ ವೋಟು ಅಂತರ
ಶಿರಹಟ್ಟಿ ರಾಮಪ್ಪ ಸೋಬೆಪ್ಪ ಲಮಾಣಿ ಬಿಜೆಪಿ 91967 ದೊಡ್ಡಮನಿ ಆರ್ ಸಿದ್ದಲಿಂಗಪ್ಪ ಕಾಂಗ್ರೆಸ್ 61974 29993
ಗದಗ ಎಚ್.ಕೆ. ಪಾಟೀಲ್ ಕಾಂಗ್ರೆಸ್ 77699 ಅನಿಲ್ ಪಿ. ಮೆಣಸಿನಕಾಯಿ ಬಿಜೆಪಿ 75831 1868
ರೋಣ ಕಲಕಪ್ಪ ಜಿ ಬಂಡಿ ಬಿಜೆಪಿ 83735 ಗುರುಪಾದಗೌಡ ಎಸ್ ಪಾಟೀಲ್ ಕಾಂಗ್ರೆಸ್ 76401 7334
ನರಗುಂದ  ಸಿ.ಸಿ.ಪಾಟೀಲ್ ಬಿಜೆಪಿ 73045 ಬಿ.ಆರ್. ಯಾವಗಲ್ ಕಾಂಗ್ರೆಸ್ 65066 7979

ಕಳೆದ ಬಾರಿ ಶಾಸಕರಾಗಿ  ಆಯ್ಕೆಯಾಗಿದ್ದ ಮೂವರೂ ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿ ಜಯಗಳಿಸಲು ವಿಫಲರಾಗಿದ್ದಾರೆ.  ಗದಗ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 74% ಮತದಾನವಾಗಿದೆ. 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sayed Isthiyakh