Asianet Suvarna News Asianet Suvarna News

ಬಿಜೆಪಿ ಪ್ಲಾನ್ ಉರುಳಿಸಲು ಕಾಂಗ್ರೆಸ್-ಜೆಡಿಎಸ್ ಪ್ರತಿತಂತ್ರ

ಶಾಸಕರ ಸಂಖ್ಯಾ ಬಲ ತಮ್ಮ ಬಳಿ ಇರುವುದರಿಂದ ಯಡಿಯೂರಪ್ಪ ಶನಿವಾರ ಕೋರಲಿರುವ ವಿಶ್ವಾಸ ಮತ ಬಿದ್ದು ಹೋಗಲಿದೆ. ಇದಕ್ಕೆ ತಾವು ಮಾಡ ಬೇಕಿರುವುದು ನಮ್ಮ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ಶನಿವಾರ ಸಂಜೆ 4 ರ ವರೆಗೂ ಕಾಪಿಟ್ಟುಕೊಳ್ಳುವುದು ಮಾತ್ರ ಎಂಬುದು ಕಾಂಗ್ರೆಸ್-ಜೆಡಿಎಸ್ ನಾಯಕರ ನಂಬಿಕೆ.
 

Floor Test : Congress JDS Plan To Farm Govt

ಬೆಂಗಳೂರು : ಶಾಸಕರ ಸಂಖ್ಯಾಬಲ ತಮ್ಮ ಬಳಿ ಇರುವುದರಿಂದ ಯಡಿಯೂರಪ್ಪ ಶನಿವಾರ ಕೋರಲಿರುವ ವಿಶ್ವಾಸ ಮತ ಬಿದ್ದು ಹೋಗಲಿದೆ. ಇದಕ್ಕೆ ತಾವು ಮಾಡ ಬೇಕಿರುವುದು ನಮ್ಮ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ಶನಿವಾರ ಸಂಜೆ 4 ರ ವರೆಗೂ ಕಾಪಿಟ್ಟುಕೊಳ್ಳುವುದು ಮಾತ್ರ ಎಂಬುದು ಕಾಂಗ್ರೆಸ್-ಜೆಡಿಎಸ್ ನಾಯಕರ ನಂಬಿಕೆ.

2 ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್-ಜೆಡಿಎಸ್‌ನ ಸಂಖ್ಯಾಬಲವಿರುವುದು. ಕಾಂಗ್ರೆಸ್‌ನ 78 ಹಾಗೂ ಜೆಡಿಎಸ್‌ನ 37 ಮತ್ತು ಇತರೆ 3 (ಬಿಎಸ್ ಪಿ, ಕೆಜಿಪಿಜಿ ಹಾಗೂ ಪಕ್ಷೇತರ ಶಾಸಕ ) ಸೇರಿ ಈ ಮೈತ್ರಿ ಕೂಟದ ಬಲ 118 ಆಗುತ್ತದೆ. ಈ ಪೈಕಿ  ಕಾಂಗ್ರೆಸ್‌ನ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಪಾಟೀಲ್ ಕೈ ಕೊಟ್ಟಿದ್ದಾರೆ ಎಂದು ಭಾವಿಸಿ ದರೂ ಉಳಿಯುವ ಬಲ 116 . ಇಷ್ಟು ಮತ ಕಾಪಿಟ್ಟುಕೊಂಡು ವಿಶ್ವಾಸ ಮತದ ವಿರುದ್ಧ ಚಲಾ ಯಿಸಿದರೆ ಯಡಿಯೂರಪ್ಪಗೆ ಸೋಲು ಖಚಿತ. 

3 ಈ ವಿಶ್ವಾಸಕ್ಕೆ ಮುಖ್ಯ ಕಾರಣ ವಿಶ್ವಾಸ ಮತಕ್ಕೆ ಬೇಕಿರುವ 111 ಸಂಖ್ಯೆ (15 ವಿಧಾನಸಭೆಯ ಹಾಲಿ ಬಲ 222.  ಈ ಪೈಕಿ ಚನ್ನಪಟ್ಟಣ ಹಾಗೂ ರಾಮನಗರ ಎರಡರಲ್ಲೂ ಆಯ್ಕೆಯಾದ ಕುಮಾರಸ್ವಾಮಿ ಅವರನ್ನು ಒಬ್ಬ ಶಾಸಕ ಎಂದು ಪರಿಗಣಿಸುವುದರಿಂದ ಹಾಲಿ ಸಂಖ್ಯೆ 221, ಈ ಸಂಖ್ಯೆಯಲ್ಲಿ ಬಹುಮತಕ್ಕೆ ಬೇಕಿರುವ ಸಂಖ್ಯೆ 111). ಆದರೆ, ಬಿಜೆಪಿ ಬಳಿ ಇರುವುದು 104 ಮಾತ್ರ. 

4 ಬಿಜೆಪಿಯ ಶಾಸಕರೇ (ಕೆ.ಜೆ. ಬೋಪಯ್ಯ) ಹಂಗಾಮಿ ಸ್ಪೀಕರ್ ಆಗಿದ್ದಾರೆ. ಹೀಗಾಗಿ ಅವರು ಟೈ ಆದಾಗ ಮಾತ್ರ ಮತ ಚಲಾಯಿಸ ಬಹುದು. ಹೀಗಾಗಿ ಬಿಜೆಪಿ ಒಟ್ಟು ಬಲ ಈಗ 104 ಇದ್ದರೂ ಬಳಸಲು ಸಾಧ್ಯವಿರುವುದು 103. ಅವರಿಗೆ ಬಹುಮತಕ್ಕೆ ಇನ್ನೂ ಎಂಟು ಮತಗಳು ಬೇಕಾಗುತ್ತದೆ. ಕಾಂಗ್ರೆಸ್‌ನ ಆನಂದಸಿಂಗ್ ಹಾಗೂ ಪ್ರತಾಪ್‌ಗೌಡ ಬಿಜೆಪಿಗೆ ಬೆಂಬಲ ನೀಡಿದರೂ ಆರು ಮತಗಳ ಕೊರತೆ ಇರುತ್ತದೆ.

5 ಈ ಆರು ಮತಗಳನ್ನು ಕಾಂಗ್ರೆಸ್-ಜೆಡಿಎಸ್‌ನಿಂದ ಬಿಜೆಪಿ ಹೊಂದಿಸಬೇಕು. ಹೊಂದಿಸಿದರೂ ಕೂಡ ಆರು ಮಂದಿ ವಿಪ್ ಉಲ್ಲಂಘಿಸಿ ವಿಶ್ವಾಸ ಮತದ ಪರ ಮತಚಲಾಯಿಸಬೇಕು. ಹಾಗೆ ಮಾಡಿದರೆ ಪಕ್ಷಾಂತ ರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ. ಈ ರಿಸ್ಕ್‌ಗೆ ಶಾಸಕರು ತಯಾರಾಗುವುದಿಲ್ಲ ಎಂಬ ನಂಬಿಕೆ ಕಾಂಗ್ರೆಸ್-ಜೆಡಿಎಸ್ ನವರದು.

6 ಇದಲ್ಲದಿದ್ದರೆ, ಕಾಂಗ್ರೆಸ್-ಜೆಡಿಎಸ್‌ನ ಸಂಖ್ಯೆಯನ್ನೇ ಕುಸಿಯುವಂತೆ ಮಾಡಿ ಹಾಲಿ ಇರುವ ಬಿಜೆಪಿ ಸಂಖ್ಯೆಗೇ ಬಹುಮತವನ್ನು ತರುವುದು ಮತ್ತೊಂದು ದಾರಿ. ಇದು ಸಾಧ್ಯವಾಗಬೇಕಾದರೆ, ಲೆಕ್ಕಾಚಾರದ ಪ್ರಕಾರ 16 ಮಂದಿ ಗೈರು ಹಾಜರಾಗುವಂತೆ ಮಾಡಬೇಕು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಕಡಿಮೆ ಅವಧಿಯಲ್ಲಿ ಸಾಧ್ಯವೇ ಇಲ್ಲ ಎಂಬ ವಿಶ್ವಾಸ ದೋಸ್ತಿಗಳಲ್ಲಿದೆ.

Follow Us:
Download App:
  • android
  • ios