ಹಾವನೂರಿನಲ್ಲಿ  ಕಾಂಗ್ರೆಸ್  ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಗಲಾಟೆ ಬಿಡಿಸಲು ಬಂದ ಮಹಿಳೆಯರ ಮೇಲು  ಹಲ್ಲೆ ನಡೆದಿದೆ.  ಕಾಂಗ್ರೆಸ್ ಪಕ್ಷದ ಮೂವರು ಕಾರ್ಯಕರ್ತರಾದ ಖಲಂದರ್ ಮಹೆಬೂಬಸಾಬ ಕಲಾರಿ, ಜೆಲಾನಿ ಮೆಹೆಬೂಬಸಾಬ ಕಲಾರಿ. ಅಶೋಕ ವಡ್ಡರ, ಸಾವಿತ್ರಿ ವಡ್ಡರ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಹಾವೇರಿ (ಮೇ. 14): ಹಾವನೂರಿನಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಗಲಾಟೆ ಬಿಡಿಸಲು ಬಂದ ಮಹಿಳೆಯರ ಮೇಲು ಹಲ್ಲೆ ನಡೆದಿದೆ.

ಕಾಂಗ್ರೆಸ್ ಪಕ್ಷದ ಮೂವರು ಕಾರ್ಯಕರ್ತರಾದ ಖಲಂದರ್ ಮಹೆಬೂಬಸಾಬ ಕಲಾರಿ, ಜೆಲಾನಿ ಮೆಹೆಬೂಬಸಾಬ ಕಲಾರಿ. ಅಶೋಕ ವಡ್ಡರ, ಸಾವಿತ್ರಿ ವಡ್ಡರ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ಮುಖಂಡ ಪರಮೇಶ ಹೋಳಿಯಪ್ಪನವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. 

ಮೊನ್ನೆ ನಡೆದ ಮತದಾನ ವೇಳೆ ಬಿಜೆಪಿಗೆ ಮತ ಹಾಕುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ಮಾತು ಕೇಳದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಬಿಜೆಪಿ ಮುಖಂಡರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 

ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.