ಕಾಂಗ್ರೆಸ್ ನಾಯಕರ ನಡುವೆ ಮಾರಾಮಾರಿ; ಶಾಸಕರಿಂದ ಸಿದ್ದರಾಮಯ್ಯ, ಡಿಕೆಶಿಗೆ ಸಕತ್ ಕ್ಲಾಸ್

Fight among Congress Leaders
Highlights

ಹಿಲ್ಟನ್ ರೆಸಾರ್ಟ್ ನಲ್ಲಿರೋ ಕಾಂಗ್ರೆಸ್ ನಾಯಕರ ನಡುವೆ ಮಾರಾಮಾರಿ ನಡೆದಿದೆ. ಸಿದ್ದರಾಮಯ್ಯಗೆ ಮತ್ತು ಡಿ ಕೆ ಶಿವಕುಮಾರ್’ಗೆ ಶಾಸಕರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. 
 

ಬೆಂಗಳೂರು (ಮೇ. 22): ಹಿಲ್ಟನ್ ರೆಸಾರ್ಟ್ ನಲ್ಲಿರೋ ಕಾಂಗ್ರೆಸ್ ನಾಯಕರ ನಡುವೆ ಮಾರಾಮಾರಿ ನಡೆದಿದೆ. ಸಿದ್ದರಾಮಯ್ಯಗೆ ಮತ್ತು ಡಿ ಕೆ ಶಿವಕುಮಾರ್’ಗೆ ಶಾಸಕರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. 

ನಮ್ಮ ಮೇಲೆ ನಂಬಿಕೆ ಇಲ್ಲ ಅಂದ್ರೆ ನಮಗ್ಯಾಕೆ ಟಿಕೇಟ್ ನೀಡಿದ್ರಿ?  ನೀವು ಬೇಕಾದ್ರೆ ಮನೆಗೆ ತೆರಳಿ ರಾತ್ರಿ ಮನೆಯಲ್ಲೇ  ಕಳೆಯುತ್ತೀರಿ.  ನಮ್ಮನ್ನು ಮಾತ್ರ ಹೋಟಲ್ ನಲ್ಲಿ ತಂದು ಕೂಡಿ ಹಾಕಿದ್ದೀರಿ. ನೀವು ಹೇಳಿದ ಕಡೆಗೆಲ್ಲಾ ನಾವು ಬಂದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಿದ್ದೇವೆ.  ಆದ್ರೆ ನೀವು ಮಾತ್ರ ನಮ್ಮ ಮೇಲೆ ನಂಬಿಕೆಯನ್ನೇ  ಇಟ್ಟಿಲ್ಲ ಎಂದು ಶಾಸಕರು ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 

ನಮಗೆ ಬಿಜೆಪಿಯಿಂದ ಹಲವಾರು ಆಮಿಷ ಬಂದ್ರು ನಾವು ಯಾವುದಕ್ಕೂ ಜಗ್ಗದೆ ಪಕ್ಷದ ಪರವಾಗಿ ನಿಂತಿದ್ದೇವೆ.  ನೀವು ಮಾತ್ರ ನಮ್ಮನ್ನ ನಂಬುತ್ತಿಲ್ಲ, ಇದರ ಹಿಂದಿನ ಮರ್ಮ ಏನು ಅಂತ ನಮಗೆ ಹೇಳಿ ಎಂದು ಸುಮಾರು 36 ಜನ ಶಾಸಕರು ಪಟ್ಟು ಹಿಡಿದಿದ್ದಾರೆ.   

loader