ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕನ್ನಡ ಚಳವಳಿ ಹೋರಾಟ ಗಾರ ವಾಟಾಳ್ ನಾಗರಾಜ್ ಮಂತ್ರಿ ಆಗುವುದು ಖಚಿತ ವಾಗಿದೆ. 

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕನ್ನಡ ಚಳವಳಿ ಹೋರಾಟ ಗಾರ ವಾಟಾಳ್ ನಾಗರಾಜ್ ಮಂತ್ರಿ ಆಗುವುದು ಖಚಿತ ವಾಗಿದೆ. ಆಗಾಗ ಕರ್ನಾಟಕ ಬಂದ್‌ಗೆ ಕರೆ ನೀಡುವ ಅವರು ಸರ್ಕಾರದಲ್ಲಿ ಕರ್ನಾಟಕ ಬಂದ್ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 

ಚುನಾವಣೆ ಬಳಿಕ ಕಾವೇರಿ ಗಲಾಟೆ ಜೋರಾಗುವ ಎಲ್ಲಾ ಸಾಧ್ಯತೆ ಇದ್ದು, ವಾಟಾಳ್ ಅವರಿಗೆ ಕರ್ನಾಟಕ ಬಂದ್‌ಗೆ ಕರೆ ನೀಡುವ, ಪ್ರತಿಭಟನೆ ಯನ್ನು ನಿರ್ವಹಿಸುವ ಸಂಪೂರ್ಣ ಅಧಿಕಾರ ನೀಡಲಾಗುತ್ತದೆ.

ಅವರಿಗಾಗಿ ವಿಧಾನಸಭೆಯಲ್ಲಿ ಪ್ರತ್ಯೇಕ ಕುರ್ಚಿ ಯೊಂದನ್ನು ನೀಡಿ ಶಾಶ್ವತ ಮಂತ್ರಿಸ್ಥಾನ ನೀಡುವ ಬಗ್ಗೆ ರಾಜಕೀಯ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ. (ಸುಳ್ಳು ಸುದ್ದಿ]