ಈಶ್ವರಪ್ಪ ಕ್ಷೇತ್ರದಲ್ಲಿ ಜಾತಿಯದ್ದೇ ಆಟ

Eshwarappa Constituency -  Caste Is Main Factor
Highlights

ಎಲ್ಲರ ಗಮನ ಸೆಳೆದಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜಾತಿಯೇ ಪ್ರಮುಖ ಅಜೆಂಡಾ ಆಗಿದೆ. ಜತೆಗೆ ಅಭಿವೃದ್ಧಿಯ  ಅಂಶಗಳೂ ಇವೆ. ವಿಪ್ರ ಹಾಗೂ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. 

ಶಿವಮೊಗ್ಗ : ಎಲ್ಲರ ಗಮನ ಸೆಳೆದಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜಾತಿಯೇ ಪ್ರಮುಖ ಅಜೆಂಡಾ ಆಗಿದೆ. ಜತೆಗೆ ಅಭಿವೃದ್ಧಿಯ  ಅಂಶಗಳೂ ಇವೆ. ವಿಪ್ರ ಹಾಗೂ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. 

ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಪ್ರ ನೇತಾರರನ್ನು ಕರೆಸಿ ತಮ್ಮ ಪರ ಬೆಂಬಲಕ್ಕೆ ವೇದಿಕೆ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಯ ಸಾಂಪ್ರದಾಯಿಕ ಮುಖವನ್ನು ಮುಂದಿಡುತ್ತಿದ್ದಾರೆ.

ಅವಕಾಶ  ಕ್ಕಾಗಲೆಲ್ಲಾ ಗೋಹತ್ಯೆ ನಿಷೇಧ ಕಾಯ್ದೆ ಚರ್ಚೆಯನ್ನು ನಡೆಸುತ್ತಿದ್ದಾರೆ. ಮುಸ್ಲಿಂ ಮತಗಳು ಒಟ್ಟಾಗಿರುವ ಮುನ್ಸೂಚನೆ ಸಿಗುತ್ತಿದೆ. ಆದರೆ ಯಡಿಯೂರಪ್ಪ ಅವರು ಸಭೆ ನಡೆಸಿದ ನಂತರವೂ ಲಿಂಗಾಯತ ಮತಗಳ ನಡೆ ಇನ್ನೂ ನಿಗೂಢವಾಗಿದೆ.

ಈ ಮತಗಳ ವಿಭಜನೆಗೆ ಜೆಡಿಎಸ್ ಅಭ್ಯರ್ಥಿ ಎಚ್.ಎನ್. ನಿರಂಜನ್ ಕೈ ಹಾಕಿದ್ದಾರೆ. ಈ ಬಾರಿ ತೀವ್ರ ಹಣಾಹಣಿ ಏರ್ಪಡುವುದರಲ್ಲಿ ಅನುಮಾನವಿಲ್ಲ.

loader