ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ವಿವಿಧ ಪ್ರದೇಶದಲ್ಲಿ  ಮತದಾರರು ಸರತಿ  ಸಾಲಿನಲ್ಲಿ ನಿಂತು ಮತ ಚಾಲಾಯಿಸುತ್ತಿದ್ದಾರೆ.  ಈಗಾಗಲೇ ಅನೇಕ ಅಭ್ಯರ್ಥಿಗಳು ಬೂತ್ ಗೆ ತೆರಳಿ ಮತ ಚಲಾವಣೆ ಮಾಡಿದ್ದಾರೆ. 

ಬೆಂಗಳೂರು : ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ವಿವಿಧ ಪ್ರದೇಶದಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಾಲಾಯಿಸುತ್ತಿದ್ದಾರೆ. ಈಗಾಗಲೇ ಅನೇಕ ಅಭ್ಯರ್ಥಿಗಳು ಬೂತ್ ಗೆ ತೆರಳಿ ಮತ ಚಲಾವಣೆ ಮಾಡಿದ್ದಾರೆ. 

ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಈಗಾಗಲೇ ಮತದಾನ ಮಾಡಿದ್ದಾರೆ. ದ.ಕ ಜಿಲ್ಲೆಯ ಮಂಗಳೂರಿನ ತಾಲೂಕಿನ ಬೋಳಿಯಾರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

ಇನ್ನು ಸಿದ್ದಗಂಗ ಮಠದ ಕಿರಿಯ ಶ್ರೀಗಳೂ ಕೂಡ ಮತದಾನ ಮಾಡಿದ್ದಾರೆ. ಮಠದ ಆವರಣದಲ್ಲಿರುವ ಸಿದ್ದಲಿಂಗೇಶ್ವರ ಪ್ರಾಥಮಿಕ ಶಾಲೆಯ ಮತಗಟ್ಟೆತಲ್ಲಿ ಮತ ಚಲಾಯಿಸಿದ್ದಾರೆ. 

ಮಂಗಳೂರಿನಲ್ಲಿ ಶಾಸಕ ಜೆ‌.ಆರ್.ಲೋಬೊ ಬೆಂದೂರ್ ನಲ್ಲಿರುವ ಸೆಂಟ್ ಸಬಾಸ್ಟಿನ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಲೋಬೋ ಜೊತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. 

ಸಚಿವ‌ ಪ್ರಮೋದ್ ಮಧ್ವರಾಜ್‌ ಕೂಡ ಈಗಾಗಲೇ ಮತದಾನ ಮಾಡಿದ್ದು , ಮಲ್ಪೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ತಾಯಿ ಮನೋರಮಾ ಮಧ್ಬರಾಜ್ ಜೊತೆ ಆಗಮಿಸಿ ಇಲ್ಲಿನ ನಾರಾಯಣ ಗುರು ಶಾಲೆಯಲ್ಲಿ‌ ಮತ ಹಾಕಿದ್ದಾರೆ. 

ಇನ್ನು ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರದಲ್ಲಿ ಒಂದಾದ ಚಾಮುಂಡೇಶ್ವರಿ ಕ್ಷೇತ್ರ ಮತದಾನ ಆರಂಭವಾಗಿದ್ದು, ಇಲ್ಲಿನ ಜೆಡಿಎಸ್ ಅಭ್ಯರ್ಥಿ ಜಿಟಿ. ದೇವೇಗೌಡ ಮತದಾನ ಮಾಡಿದ್ದಾರೆ. ಗುಂಗ್ರಾಲ್ ಛತ್ರ ಗ್ರಾಮದ ಮತಗಟ್ಟೆ ಸಂಖ್ಯೆ 215 ರಲ್ಲಿ ಪತ್ನಿ ಲಲಿತಾ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ.