ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ  ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್ ಅವರನ್ನು ಖಳನಾಯಕ ಎಂದು ಸಂಬೋಧಿಸಿದಾಗ ತಕ್ಷಣ ಸ್ಪಷ್ಟನೆ ನೀಡಿದ ಅವರು, ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಆಜ್ಞೆಯಂತೆ ಕೆಲಸ ಮಾಡಿದ್ದೇನೆ ವಿನಃ ನಾನು ಖಳ ನಾಯಕನ ಕೆಲಸ ಮಾಡಿಲ್ಲ ಎಂದು ತಿಳಿಸಿದರು.

ಬೆಂಗಳೂರು[ಮೇ.25]: ನನಗೆ ಯಾವುದೇ ಬೇಸರ ಇಲ್ಲ ನನಗೂ ಮಕ್ಕಳು, ಸಂಸಾರ ಇದೆ ಎಂದು ಮಾಜಿ ಸಚಿವ ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎರಡು ದಿನ ಊರಿಗೆ ಹೋಗಿದ್ದೆ ಹಿಲ್ಟನ್ ಹೋಟೆಲ್ ಗೆ ಹೋಗಲಾಗಿಲ್ಲ. ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಕ್ಲಿಷ್ಟವಾಗಿದ್ದು ಚುನಾವಣೆಗೆ 2 ಪಕ್ಷ ಒಂದು ಮಾಡ್ತಿದ್ದೇವೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿಯವರ ಜೊತೆ ಮಾತನಾಡಿದ್ದು ಜೆಡಿಎಸ್ ಬೆಂಬಲ ಕೊಡದಿದ್ದರೂ ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಾನು ಖಳನಾಯಕನಲ್ಲ