ಜಿಲ್ಲಾ ಉಸ್ತುವಾರಿಯಲ್ಲಿ ಮೂಡದ ಒಮ್ಮತ

Difference of opinion in JDS and Congress
Highlights

ಜೆಡಿಎಸ್ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಸಂಕಟ ಶುರುವಾಗಿದೆ.  ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲಿ ಒಮ್ಮತ ಮೂಡಿಲ್ಲ.  ಕಾಂಗ್ರೆಸ್ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಜೆಡಿಎಸ್ ಗೆ ಉಸ್ತುವಾರಿ ಕಾಂಗ್ರೆಸ್ ಒಪ್ಪುತ್ತಿಲ್ಲ.  ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳನ್ನ ಕಾಂಗ್ರೆಸ್ ಕೈಗೆ ನೀಡದಂತೆ  ಜೆಡಿಎಸ್ ಶಾಸಕರು ದೇವೇಗೌಡರಿಗೆ ಒತ್ತಾಯಿಸಿದ್ದಾರೆ. 

ಬೆಂಗಳೂರು (ಮೇ. 22): ಜೆಡಿಎಸ್ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಸಂಕಟ ಶುರುವಾಗಿದೆ.  ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲಿ ಒಮ್ಮತ ಮೂಡಿಲ್ಲ. 

ಕಾಂಗ್ರೆಸ್ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಜೆಡಿಎಸ್ ಗೆ ಉಸ್ತುವಾರಿ ಕಾಂಗ್ರೆಸ್ ಒಪ್ಪುತ್ತಿಲ್ಲ.  ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳನ್ನ ಕಾಂಗ್ರೆಸ್ ಕೈಗೆ ನೀಡದಂತೆ  ಜೆಡಿಎಸ್ ಶಾಸಕರು ದೇವೇಗೌಡರಿಗೆ ಒತ್ತಾಯಿಸಿದ್ದಾರೆ. 

ತುಮಕೂರು ಜಿಲ್ಲೆ ಉಸ್ತುವಾರಿಗೆ ಪರಮೇಶ್ವರ್ ಪಟ್ಟು ಹಿಡಿದಿದ್ದಾರೆ. ತುಮಕೂರು ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆ. ಕಾಂಗ್ರೆಸ್ ನವರಿಗೆ ಉಸ್ತುವಾರಿ ನೀಡದಂತೆ ಜೆಡಿಎಸ್ ಶಾಸಕರು ಒತ್ತಾಯಪಡಿಸಿದ್ದಾರೆ.  ಜೆಡಿಎಸ್ ನ ಸತ್ಯನಾರಾಯಣ್ ಅಥವಾ ಎಸ್ ಆರ್ ಶ್ರೀನಿವಾಸ್’ಗೆ ಉಸ್ತುವಾರಿ ನೀಡಲು ಪಟ್ಟು ಹಿಡಿದಿದ್ದಾರೆ. 

ಕೋಲಾರದಲ್ಲಿ ಕಾಂಗ್ರೆಸ್’ಗೆ ಉಸ್ತುವಾರಿ ಬಿಟ್ಟುಕೊಡಲು ಕೆ.ಎಚ್ ಮುನಿಯಪ್ಪ ಒತ್ತಾಯಪಡಿಸಿದ್ದಾರೆ.  ಕೋಲಾರದಲ್ಲಿ ಕಾಂಗ್ರೆಸ್ ಹೆಚ್ಚು ಸೀಟು ಪಡೆದಿದೆ. ತಮ್ಮ ಪುತ್ರಿ ರೂಪಕಲಾ ಅವರನ್ನ ಸಚಿವರನ್ನಾಗಿ ಮಾಡಲು ಬೇಡಿಕೆ ಇಟ್ಟಿದ್ದಾರೆ. 
ಮೈಸೂರು ಉಸ್ತುವಾರಿ ಕಾಂಗ್ರೆಸ್ ನವರಿಗೆ ಕೊಡಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ತನ್ವೀರ್ ಸೇಠ್ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯ ವಿರೋಧ ಕಟ್ಟಿಕೊಂಡಿದ್ದ ಎಚ್ ವಿಶ್ವನಾಥ್ ಗೆ ಅಥವಾ ಜಿ.ಟಿ ದೇವೇಗೌಡ ಅವರಿಗೆ ಮೈಸೂರು ಉಸ್ತುವಾರಿ ನೀಡಲು ದೇವೇಗೌಡರ ಚಿಂತನೆ ನಡೆಸಿದ್ದಾರೆ. 
 

loader