ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಒಟ್ಟಿಗೆ ಬಂದಿದ್ದರಿಂದ ಗೊಂದಲವಾಯ್ತು: ನೀಲಮಣಿ ರಾಜು

First Published 24, May 2018, 1:08 PM IST
DGP Neelamani Raju Submit Report to HDK
Highlights

ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಏಕಕಾಲಕ್ಕೆ ಬಂದ ಹಿನ್ನಲೆಯಲ್ಲಿ  ಮಮತಾ ಬ್ಯಾನರ್ಜಿ ಕಾರನ್ನು ತಡೆಯಲಾಗಿತ್ತು.  ಕೆಲಕಾಲ ಗೊಂದಲವಾದ್ದರಿಂದ ಮಮತಾ ಬ್ಯಾನರ್ಜಿ ರಸ್ತೆಯಲ್ಲಿಯೇ ನಡೆದುಕೊಂಡು ಬಂದ್ರು.  ಸಂಚಾರಿ ಪೋಲೀಸರು ಸರಿಯಾದ ಕ್ರಮ ಕೈಗೊಳ್ಳಲಿಲ್ಲ.  ಡಿಸಿಪಿ ಅನುಪಮ ಅಗರವಾಲ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು  ಸಿಎಂ ಕುಮಾರಸ್ವಾಮಿಗೆ  ಡಿಜಿಪಿ ನೀಲಮಣಿ ವರದಿ ಸಲ್ಲಿಸಿದ್ದಾರೆ.  

ಬೆಂಗಳೂರು (ಮೇ. 24): ಎಚ್ ಡಿಕೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಆದ ಎಡವಟ್ಟಿನಿಂದಾಗಿ ಮಮತಾ ಬ್ಯಾನರ್ಜಿ ನಡೆದುಕೊಂಡೇ ಹೋಗಿದ್ದು  ಭಾರೀ ಸುದ್ದಿಯಾಗಿತ್ತು. ಡಿಜಿಪಿ ನೀಲಮಣಿ ರಾಜು ಮೇಲೆ ಎಚ್ ಡಿಕೆ ಹಾಗೂ ದೇವೇಗೌಡರು ಗರಂ ಆಗಿದ್ದರು. 

ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಏಕಕಾಲಕ್ಕೆ ಬಂದ ಹಿನ್ನಲೆಯಲ್ಲಿ  ಮಮತಾ ಬ್ಯಾನರ್ಜಿ ಕಾರನ್ನು ತಡೆಯಲಾಗಿತ್ತು.  ಕೆಲಕಾಲ ಗೊಂದಲವಾದ್ದರಿಂದ ಮಮತಾ ಬ್ಯಾನರ್ಜಿ ರಸ್ತೆಯಲ್ಲಿಯೇ ನಡೆದುಕೊಂಡು ಬಂದ್ರು.  ಸಂಚಾರಿ ಪೋಲೀಸರು ಸರಿಯಾದ ಕ್ರಮ ಕೈಗೊಳ್ಳಲಿಲ್ಲ.  ಡಿಸಿಪಿ ಅನುಪಮ ಅಗರವಾಲ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು  ಸಿಎಂ ಕುಮಾರಸ್ವಾಮಿಗೆ  ಡಿಜಿಪಿ ನೀಲಮಣಿ ವರದಿ ಸಲ್ಲಿಸಿದ್ದಾರೆ. 

ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಪೋಲೀಸರು ಭದ್ರತೆ ನೀಡಿಲ್ಲ.  ಪೊಲೀಸ್ ವೈಫಲ್ಯ ಕಂಡು ಸಮಾರಂಭದ ವೇದಿಕೆ ಮೇಲೆ ಕುಮಾರಸ್ವಾಮಿ ವಿರುದ್ಧ  ಮಮತಾ ಬ್ಯಾನರ್ಜಿ ಗರಂ ಆಗಿದ್ದರು. 

ಇಂದು ಡಿಜಿಪಿ ನೀಲಮಣಿ ರಾಜು ನಿನ್ನೆ ನಡೆದ ಎಡವಟ್ಟುಗಳನ್ನ ಕುರಿತು  ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನಿನ್ನೆಯ ಟ್ರಾಫಿಕ್ ನಿಯಂತ್ರಣ, ಮತ್ತು ಕಾನೂನು ಸುವ್ಯವಸ್ಥೆಯಲ್ಲಿ‌ ಲೋಪದ ಬಗ್ಗೆ ಚರ್ಚೆ ನಡೆಸಿದ್ದಾರೆ.   

loader