ಪರಂ 9ನೇ ಉಪಮುಖ್ಯಮಂತ್ರಿ, ಉಳಿದ ಡಿಸಿಎಂಗಳ ಪಟ್ಟಿ

First Published 22, May 2018, 9:06 PM IST
Deputy Chief Minister of Karnataka
Highlights

 ರಾಜ್ಯದ ಮೊದಲ ಉಪ ಮುಖ್ಯಮಂತ್ರಿಯಾಗಿದ್ದವವರು ಎಸ್.ಎಂ. ಕೃಷ್ಣ 1992 ರಲ್ಲಿ. ವೀರಪ್ಪ ಮೋಯ್ಲಿ ಸಿಎಂ ಆಗಿದ್ದಾಗ ಎಸ್.ಎಂ.  ಡಿ.ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.

ಬೆಂಗಳೂರು(ಮೇ.22): ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ನಾಳೆ ರಾಜ್ಯದ 8ನೇ ಉಪಮುಖ್ಯಮಂತ್ರಿಯಾಗಿ ಮೇ.22ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂವಿಧಾನತ್ಮಕವಾಗಿ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲದಿದ್ದರೂ ಮುಖ್ಯಮಂತ್ರಿ ನಂತರ ಹೆಚ್ಚು ಘನತೆ ಪಡೆದುಕೊಂಡಿದೆ.  ರಾಜ್ಯದ ಮೊದಲ ಉಪ ಮುಖ್ಯಮಂತ್ರಿಯಾಗಿದ್ದವವರು ಎಸ್.ಎಂ. ಕೃಷ್ಣ 1992 ರಲ್ಲಿ. ವೀರಪ್ಪ ಮೋಯ್ಲಿ ಸಿಎಂ ಆಗಿದ್ದಾಗ ಎಸ್.ಎಂ.  ಡಿ.ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.
 
1) ಎಸ್.ಎಂ. ಕೃಷ್ಣ - ನವೆಂಬರ್ 19, 1992  ರಿಂದ - 09 ಡಿಸೆಂಬರ್ , 1994 (ಕಾಂಗ್ರೆಸ್)

2] ಜೆ.ಹೆಚ್. ಪಟೇಲ್ - ಡಿಸೆಂಬರ್ 11,1994 ರಿಂದ - 31 ಮೇ , 1996 [ಜನತಾದಳ]

3]ಸಿದ್ದರಾಮಯ್ಯ - ಮೇ 31, 1996 ರಿಂದ - 07 ಅಕ್ಟೋಬರ್ , 1999 [ಜನತಾದಳ]

4]ಸಿದ್ದರಾಮಯ್ಯ - ಮೇ 28, 2004 - 05 ಆಗಸ್ಟ್ 2005 [ಜೆಡಿಎಸ್]

5] ಎಂ.ಪಿ.ಪ್ರಕಾಶ್ - 08 ಆಗಸ್ಟ್ 2005, - 28 ಜನವರಿ 2006 [ಜೆಡಿಎಸ್]

6] ಬಿ.ಎಸ್.ಯಡಿಯೂರಪ್ಪ - 03 ಫೆಬ್ರವರಿ 2006 - 08 ಅಕ್ಟೋಬರ್ 2007 [ಬಿಜೆಪಿ]

7] ಆರ್.ಅಶೋಕ್ - 12 ಜುಲೈ 2012 - 12 ಮೇ 2013[ಬಿಜೆಪಿ]

8] ಕೆ.ಎಸ್.ಈಶ್ವರಪ್ಪ - 12 ಜುಲೈ 2012 - 12 ಮೇ 2013 [ಬಿಜೆಪಿ]

9) ಜಿ.ಪರಮೇಶ್ವರ್ - ಮೇ.23 2018 ರಿಂದ [ಕಾಂಗ್ರೆಸ್] 

loader