ದಲಿತರಿಗೆ ಸಿಎಂ ಪಟ್ಟ ತಪ್ಪಿಸಲು ಷಡ್ಯಂತ್ರ

karnataka-assembly-election-2018 | Tuesday, May 22nd, 2018
Suvarna Web Desk
Highlights

ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ತಪ್ಪಿಸುವ ಸಲುವಾಗಿ ಚುನಾವಣೆ ಫಲಿತಾಂಶ ಸಂಪೂರ್ಣವಾಗಿ ಹೊರಬರುವ ಮುನ್ನವೇ ಕಾಂಗ್ರೆಸ್ ಪಕ್ಷದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ಸೂಚಿಸಿದ್ದಾರೆ ಎಂದು ದಲಿತ  ಮುಖ್ಯಮಂತ್ರಿ ಹೋರಾಟ ವೇದಿಕೆ ಆರೋಪಿಸಿದೆ. 

ಬೆಂಗಳೂರು: ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ತಪ್ಪಿಸುವ ಸಲುವಾಗಿ ಚುನಾವಣೆ ಫಲಿತಾಂಶ ಸಂಪೂರ್ಣವಾಗಿ ಹೊರಬರುವ ಮುನ್ನವೇ ಕಾಂಗ್ರೆಸ್ ಪಕ್ಷದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ಸೂಚಿಸಿದ್ದಾರೆ ಎಂದು ದಲಿತ  ಮುಖ್ಯಮಂತ್ರಿ ಹೋರಾಟ ವೇದಿಕೆ ಆರೋಪಿಸಿದೆ. 

ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಅನಂತರಾಯಪ್ಪ, ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ದಲಿತರಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತಿತ್ತು. ಅದನ್ನು ತಪ್ಪಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷ  ಷಡ್ಯಂತ್ರ ರೂಪಿಸಿದೆ ಎಂದು ದೂರಿದರು. 

ಮೈತ್ರಿ ಮಾಡಿ ಕೊಳ್ಳುವಾಗ ಮುಖ್ಯಮಂತ್ರಿ ಪದವಿಯನ್ನು ಸಮಾನ ಅವಧಿಗೆ ಹಂಚಿಕೆ ಮಾಡಿ ಇಬ್ಬರನ್ನು ಸಿಎಂ ಆಗಿ ಆಯ್ಕೆ ಮಾಡ ಲಾಗುತ್ತದೆ. ಆದರೆ, ಈಗ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಕಾರಣದಿಂದಾಗಿ ಜೆಡಿಎಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು.

Comments 0
Add Comment

    ಈ ಸ್ಪೇನ್ ಆಟಗಾರನಿಗೆ ಬ್ರೆಝಿಲ್ ಆಟ ನೋಡೋದೇ ಮಜಾ ಅಂತೆ!

    sports | Wednesday, June 20th, 2018