ಬೆಂಗಳೂರು: ಚುನಾವಣಾ ಪ್ರಚಾರದ ಭರಾಟೆ ಹೆಚ್ಚಾಗುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಕೆಸರೆರಚಾಟ ಮುಂದುವರಿದಿದೆ. ಅಖಾಡದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ನೇರ ಹಣಾಹಣಿ ಇದ್ದು, ಜೆಡಿಎಸ್ ಕಿಂಗ್ ಮೇಕರ್ ಆಗುವುದು ಬಹುತೇಕ ಸಮೀಕ್ಷೆಗಳಲ್ಲಿ ಸ್ಪಷ್ಟವಾಗಿದೆ.

ಜನರಲ್ಲಿಯೂ ಮತ ಚಲಾಯಿಸುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಮತದಾರರ ಒಲವು ಯಾವ ಪಕ್ಷದೆಡೆಗೆ ಇದೆ ಎಂಬ ಚಿತ್ರಣ ಸಿಕ್ಕಿಲ್ಲ.  ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕಾಂಗ್ರೆಸ್ಸಿಗೆ ಬಹುಮತ ಸಿಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಕಾಂಗ್ರೆಸ್ ಬಹುಮತ ಪಡೆಯುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, 2013ರ ಚುನಾವಣಾ ಫಲಿತಾಂಶವೇ ಈ ಭಾರಿಯೂ ಪುನರಾವರ್ತನೆಯಾಗಲಿದೆ,' ಎಂದ ಸಿಎಂ 'ಕೆಲವು ಸ್ವಘೋಷಿತ ಕಿಂಕ್ ಮೇಕರ್‌ಗಳು ಇಂಥ ಗಾಳಿ ಸುದ್ದಿಯನ್ನು ಹರಿಯ ಬಿಡುತ್ತಿದ್ದಾರೆ,' ಎಂದು ಹೇಳಿದ್ದಾರೆ.