ಸೋಲಿನ ಸನ್ನಿಹಿತ : ಬಾವುಟ ತೆರವುಗೊಳಿಸಿದ ಕೈ ಕಾರ್ಯಕರ್ತರು

First Published 15, May 2018, 11:06 AM IST
Congress party workers remove flags as defeat approaches
Highlights

ಕರ್ನಾಟಕದಲ್ಲಿ ಮೋದಿ ಅಲೆ ವರ್ಕೌಟ್ ಆಗಿದ್ದು, ಈಗಾಗಲೇ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ  ಮುನ್ನಡೆ ಕಾಯ್ದುಕೊಂಡಿದೆ.  ಬಿಜೆಪಿ ಐವರು ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಹಾಕಿದ್ದ ಬಾವುಟಗಳನ್ನು ತೆರವುಗೊಳಿಸಿದ್ದಾರೆ. 

ಬೆಂಗಳೂರು : ಕರ್ನಾಟಕದಲ್ಲಿ ಮೋದಿ ಅಲೆ ವರ್ಕೌಟ್ ಆಗಿದ್ದು, ಈಗಾಗಲೇ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ  ಮುನ್ನಡೆ ಕಾಯ್ದುಕೊಂಡಿದೆ.  ಬಿಜೆಪಿ ಐವರು ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. 

ಈಗಾಗಲೇ ಕಾಂಗ್ರೆಸ್ ಮೂವರು ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ.  ಇನ್ನು ಜೆಡಿಎಸ್ ಕೂಡ ತನ್ನ ಖಾತೆ ತೆರೆದಿದ್ದು, 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. 

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಖಚಿತವಾಗಿರುವ ಕಾರ್ಯರ್ತರು ಬೆಂಗಳೂರಿನಲ್ಲಿ ಹಾಕಿದ್ದ ತಮ್ಮ ಪಕ್ಷ ಬಾವುಟಗಳನ್ನು ತೆರವುಗೊಳಿಸಿದ್ದಾರೆ.  ಪ್ರಚಾರದ ವೇಳೆ ಗೆಲುವಿನ ಭರವಸೆಯೊಂದಿಗೆ ಹಾಕಿದ್ದ ತಮ್ಮ ಪಕ್ಷದ ಬಾವುಟಗಳನ್ನು ತೆಗೆದಿದ್ದಾರೆ. 

loader