ಮತ ಕೇಳಲು ಹೋದ ಕೈ ಶಾಸಕರಿಗೆ ಕ್ಲಾಸ್ ಜನ!

Congress MLA Embarrass during Campaign
Highlights

ಹುಣಸೂರು ಕಾಂಗ್ರೆಸ್ ಶಾಸಕ ಎಚ್’ಪಿ ಮಂಜುನಾಥ್’ಗೆ ಸಾರ್ವಜನಿಕರು ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ.  ಎಚ್ ಪಿ ಮಂಜುನಾಥ್ ಕಚುವಿನಹಳ್ಳಿ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದಾಗ ಜನರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.  

ಮೈಸೂರು (ಏ. 30): ಹುಣಸೂರು ಕಾಂಗ್ರೆಸ್ ಶಾಸಕ ಎಚ್’ಪಿ ಮಂಜುನಾಥ್’ಗೆ ಸಾರ್ವಜನಿಕರು ಸಕ್ಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ.    

ಎಚ್ ಪಿ ಮಂಜುನಾಥ್ ಕಚುವಿನಹಳ್ಳಿ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದಾಗ ಜನರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.  ನೀವು ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಮತ ಕೇಳಲು ಬಂದಿದ್ದೀರಿ ಎಂದು  ಶಾಸಕರಿಗೆ  ಗ್ರಾಮದ ಜನ ಪ್ರಶ್ನಿಸಿದ್ದಾರೆ. 

ಗ್ರಾಮಸ್ಥರ ಪ್ರಶ್ನೆಗೆ ಶಾಸಕರು ಉತ್ತರ ಕೊಡಲು ಮುಂದಾದಾಗ  ಜನ ಸಮಾಧಾನಗೊಳ್ಳಲಿಲ್ಲ.  ಈ ವೇಳೆ ಗ್ರಾಮದ ಓರ್ವನನ್ನು ತರಾಟೆಗೆ ಶಾಸಕ ಮಂಜುನಾಥ್  ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಶಾಸಕ ಮತ್ತು ವ್ಯಕ್ತಿ ನಡುವೆ ಮಾತಿನ ಚಕಮಕಿ ನಡೆದಿದೆ.  ಈ ವೇಳೆ ವ್ಯಕ್ತಿಯನ್ನು ಕತ್ತಿನ ಪಟ್ಟಿ ಹಿಡಿದು ಶಾಸಕ ಮಂಜುನಾಥ್ ನೂಕಿದ್ದಾರೆ.  ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ  ಶಾಸಕರು ಮತ ಕೇಳದೆ ಹಾಗೇ ವಾಪಸ್ಸಾಗಿದ್ದಾರೆ. 

loader