ಮಂಗಳೂರು : ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ೧೨೮ ಪುಟಗಳ  ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ  ಮಾಡಿದ್ದು, ಉದ್ಯೋಗ ಭರವಸೆ ಸೇರಿದಂತೆ ವಿವಿಧ ರೀತಿಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.  ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಕೆಲ ಪ್ರಮುಖ ಅಂಶಗಳು ಇಂತಿವೆ.

ಮುಂದಿನ 5 ವರ್ಷದಲ್ಲಿ 10 ಲಕ್ಷ ಮನೆ
2025ಕ್ಕೆ ನವ ಕರ್ನಾಟಕ ನಿರ್ಮಾಣದ ಆಶಯ
ರಾಜ್ಯದ ಪ್ರಮುಖ ರಸ್ತೆಗಳ ಅಭಿವೃದ್ಧಿ
ರೈತರ ಆದಾಯ ದ್ವಿಗುಣಗೊಳಿಸಲು ಒತ್ತು
ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ
ಪ್ರತಿ ವರ್ಷ 15ರಿಂದ 20 ಲಕ್ಷ ಉದ್ಯೋಗ ಸೃಷ್ಟಿ
20 ಸಾವಿರ ಐಟಿ ಸ್ಟಾರ್ಟಪ್ಸ್​
ಪ್ರತಿ ಜಿಲ್ಲೆಗೆ 50 ಹಾಸಿಗೆಯ ಆಯುಷ್​ ಆಸ್ಪತ್ರೆ
ಪ್ರತಿ 3 ಜಿಲ್ಲೆಗೆ 1 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ತಳಮಟ್ಟದಲ್ಲಿ 5 ಸಾವಿರ ಸ್ತ್ರೀ ಶಕ್ತಿ ಸಂಘಗಳ ರಚನೆ
ನೀರಾವರಿ 1 ಲಕ್ಷ 25 ಸಾವಿರ ಕೋಟಿ ರೂ. ಮೀಸಲು
ನಗರ ಪ್ರದೇಶದಲ್ಲಿ ಒಂದು ಮನೆಗೆ ಒಂದು ನಲ್ಲಿ
ಕರ್ನಾಟಕಕ್ಕೆ ಕೃಷಿ ಕಾರಿಡಾರ್​ ನಿರ್ಮಾಣ
ರಾಜ್ಯದ ಪ್ರತಿ ಹಳ್ಳಿಗಳಿಗೆ ದಿನ 24 ಗಂಟೆ ನೀರು

ಎಲ್ಲರಿಗೂ ವಿದ್ಯುತ್​​ ಭಾಗ್ಯ
20 ಸಾವಿರ ಹೊಸ ಅಂಗನವಾಡಿ ನಿರ್ಮಾಣ
ಪ್ರವಾಸೋದ್ಯಮದ ಮೂಲಕ 65 ಲಕ್ಷ ಉದ್ಯೋಗ ಸೃಷ್ಟಿ
ಸೋಲಿಗರು, ಕೊರಗರು, ಪಂಬದ, ನಲಿಕೆ, ಪರವ, ಕುಡುಬಿ ಜನಾಂಗದ ಎಲ್ಲರಿಗೂ ವಸತಿ
ಮಂಗಳೂರು- ಹುಬ್ಬಳ್ಳಿ ನಡುವೆ ವಿಮಾನ ಸಂಪರ್ಕ 
ಎಲ್ಲ ಹಳ್ಳಿಗಳು ಸರ್ವ ಋತು ರಸ್ತೆ
15 ಟಿಎಂಸಿ ಕಾವೇರಿ ನೀರು ಹೆಚ್ಚುವರಿ ಬಳಕೆಗೆ ನೀಲನಕ್ಷೆ
ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿಗೆ ಮುಂದಿನ ಬಜೆಟ್​ನಲ್ಲಿ ಹೆಚ್ಚುವರಿ ಅನುದಾನ
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆದ್ಯತೆ
75 ಟಿಎಂಸಿ ನೀರು ಸದ್ಭಳಕೆಗೆ ನೀಲನಕ್ಷೆ
ಅಪೌಷ್ಠಿಕತೆ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಆದ್ಯತೆ
ಎಲ್ಲ ರಾಜ್ಯಗಳಲ್ಲೂ ಆನ್​ಲೈನ್​ ಯೋಜನೆ ಜಾರಿ

ನೀರಾವರಿ ಯೋಜನೆಗಳು
ನೀರಾವರಿಗಾಗಿ 1 ಲಕ್ಷ 25 ಸಾವಿರ ಕೋಟಿ ಮೀಸಲು
ಹುಬ್ಬಳ್ಳಿ-ಧಾರವಾಡ, ಹಾವೇರಿ- ಗದಗ ಒಳಗೊಂಡ ಮಧ್ಯ ಕರ್ನಾಟಕಕ್ಕೆ ಕುಡಿಯುವ ನೀರು
ಅಘನಾಶಿನಿ- ಬೇಡ್ತಿ ನದಿಗಳನ್ನು ವರದಾ ಅಣೆಕಟ್ಟಿಗೆ ಜೋಡಣೆ
ಕೃಷ್ಣಾ ಮೇಲ್ಡಂಡೆ 3ನೇ ಹಂತ ವಿಸ್ತಣೆ