ಹಾವೇರಿಯಲ್ಲಿ ಸಚಿವ ಸ್ಥಾನಕ್ಕಾಗಿ ಮುಸುಕಿನ ಗುದ್ದಾಟ

First Published 22, May 2018, 10:46 AM IST
Congress Leaders Wants Give Minister Post To BC Patil
Highlights

ಹಾವೇರಿಯಲ್ಲಿ ಸಚಿವ ಸ್ಥಾನಕ್ಕಾಗಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಬಿ.ಸಿ.ಪಾಟೀಲ್ ಹಾಗೂ ಆರ್.ಶಂಕರ್ ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ.   ಬಿ.ಸಿ.ಪಾಟೀಲ್ ಪರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಲಾಬಿ ನಡೆಸುತ್ತಿದ್ದಾರೆ. 
 

ಬೆಂಗಳೂರು : ಹಾವೇರಿಯಲ್ಲಿ ಸಚಿವ ಸ್ಥಾನಕ್ಕಾಗಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಬಿ.ಸಿ.ಪಾಟೀಲ್ ಹಾಗೂ ಆರ್.ಶಂಕರ್ ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ.   ಬಿ.ಸಿ.ಪಾಟೀಲ್ ಪರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಲಾಬಿ ನಡೆಸುತ್ತಿದ್ದಾರೆ. 

ಕಾಂಗ್ರೆಸ್ ಮುಖಂಡ  ಕೆ.ಬಿ.ಕೋಳಿವಾಡ ಅವರು ಪ್ರಬಲ ಲಾಬಿ ನಡೆಸಿದ್ದಾರೆ. ಕೋಳಿವಾಡ ವಿರುದ್ಧ ಗೆಲುವು ಪಡೆದ ರಾಣೆಬೆನ್ನೂರಿನ ಕೆಪಿಜೆಪಿ ಶಾಸಕರಾದ  ಆರ್.ಶಂಕರ್ ಸಚಿವರಾಗದಂತೆ ತಡೆಯಲು ಕೋಳಿವಾಡ್ ಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. 

ಕೆ.ಬಿ.ಕೋಳಿವಾಡ,  ಬಸವರಾಜ್ ಶಿವಣ್ಣವರ್ ಸೇರಿ ಹಲವು ಮುಖಂಡರು ಈ ಸಂಬಂಧ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದು, ಬಿ.ಸಿ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾ ಯಿಸಿದ್ದಾರೆ  ಎನ್ನಲಾಗಿದೆ.  ಅಲ್ಲದೇ ಬಿ.ಸಿ.ಪಾಟೀಲರಿಗೆ ಮಂತ್ರಿ ಸ್ಥಾನದ ಜೊತೆಗೆ ಹಾವೇರಿ ಉಸ್ತುವಾರಿ ನೀಡಲು ಕೂಡ ಈ ವೇಳೆ ಮುಖಂಡರು ಮನವಿ ಮಾಡಿದ್ದಾರೆ.

ಹಾವೇರಿಯಿಂದ ಆಯ್ಕೆಯಾಗಿರುವ ಎಕೈಕ ಕೈ ಶಾಸಕ ಬಿ.ಸಿ.ಪಾಟೀಲ್ ಗೆ ಸಚಿವ ಸ್ಥಾನ ನೀಡದೇ ಹೋದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮ ಆಗುವುದು ಖಂಡಿತ ಎಂದು ಪರಮೇಶ್ವರ ಭೇಟಿ ವೇಳೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ.

loader