4 ಎಂಎಲ್ ಸಿ ಸ್ಥಾನಕ್ಕೆ 6 ಕಾಂಗ್ರೆಸಿಗರ ಪೈಪೋಟಿ

Congress Leader Competition For MLC Seat
Highlights

ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ನಿರ್ಮಾಣವಾಗಿದ್ದು, ಮಾಜಿ ಮೇಯರ್ ರಾಮಚಂದ್ರಪ್ಪ, ಕೆ. ಗೋವಿಂದರಾಜು ಸಿ.ಎಂ. ಇಬ್ರಾಹಿಂ, ಎಂ.ಆರ್.ಸೀತಾರಾಂ ತೀವ್ರ ಪೈಪೋಟಿ ಆರಂಭಿಸಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ನಿರ್ಮಾಣವಾಗಿದ್ದು, ಮಾಜಿ ಮೇಯರ್ ರಾಮಚಂದ್ರಪ್ಪ, ಕೆ. ಗೋವಿಂದರಾಜು ಸಿ.ಎಂ. ಇಬ್ರಾಹಿಂ, ಎಂ.ಆರ್.ಸೀತಾರಾಂ ತೀವ್ರ ಪೈಪೋಟಿ ಆರಂಭಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ 78 ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್ ಈ ಬಾರಿ 4 ಮಂದಿಯನ್ನು ಸುಲಭ ವಾಗಿ ವಿಧಾನಪರಿಷತ್ತಿಗೆ ಆಯ್ಕೆ ಮಾಡುವ ಸಾಮರ್ಥ್ಯ ಹೊಂದಿದೆ. 

ಈ ನಾಲ್ಕು ಸ್ಥಾನಗಳಿಗಾಗಿ ಹಲವಾರು ಮಂದಿ ಪ್ರಯತ್ನ ಆರಂಭಿಸಿದ್ದರೂ ಪ್ರಮುಖವಾಗಿ ಆರು ಮಂದಿ ತೀವ್ರ ಪೈಪೋಟಿಯಲ್ಲಿದ್ದಾರೆ. ಈ ಪೈಕಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಟ್ಟಾಳು ಎನಿಸಿದ ಮಾಜಿ ಮೇಯರ್ ರಾಮಚಂದ್ರಪ್ಪ ಅವರಿಗೆ ಈ ಬಾರಿಯಾದರೂ ಧಾನ ಪರಿಷತ್ ಹುದ್ದೆ ಒಲಿಯುವುದೇ ಎಂಬ ಪ್ರಶ್ನೆ ಹುಟ್ಟಿದೆ.

ಹಲವು ಬಾರಿ ಈ ಹುದ್ದೆಯನ್ನು ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿರುವ ರಾಮಚಂದ್ರಪ್ಪ ಅವರಿಗೆ ಈ ಬಾರಿ ಹುದ್ದೆಯ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ನಂಬಿಕೊಂಡಿದ್ದಾರೆ. ಇನ್ನು ಕೆ.ಗೋವಿಂದ ರಾಜು, ಸಿ.ಎಂ. ಇಬ್ರಾಹಿಂ, ಎಂ.ಆರ್.  ಸೀತಾರಾಂ ಮತ್ತೆ ವಿಧಾನಪರಿಷತ್ ಪ್ರವೇಶಿಸಲು ಲಾಬಿ ಆರಂಭಿಸಿದ್ದಾರೆ. ಜತೆಗೆ, ಮಲ್ಲಿಕಾರ್ಜುನ ಖರ್ಗೆ ಅವರು ಯು.ಬಿ. ವೆಂಕಟೇಶ್ ಪರ ನಿಂತಿದ್ದರೆ, ಲಿಂಗಾಯತ ಕೋಟಾದಲ್ಲಿ ರಾಣಿ ಸತೀಶ್ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ನಾಯಕತ್ವ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.

loader