ಇನ್ನು ಯಡಿಯೂರಪ್ಪ ಪರಿಸ್ಥಿತಿ ಹಳೆಯ ಸಾವಿರ ಮತ್ತು 500 ರು. ನೋಟು ಆದಂತಾಗಿದೆ. ನಿಮ್ಮ ಮಗನಿಗೂ ಸೀಟ್ ಇಲ್ಲ, ನಮ್ಮಕ್ಕ ಶೋಭಾಗೂ ಸೀಟ್ ಇಲ್ಲ ಎಂದು ಬಿಎಸ್‌ವೈರನ್ನು ಛೇಡಿಸಿದರು.
ಯಾದಗಿರಿ(ಮೇ.01): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧಾರಣ ಟಗರಲ್ಲ. ಹಿಂದೆ ಈ ಟಗರು ಜನಾರ್ದನರೆಡ್ಡಿಗೆ ಗುದ್ದಿತ್ತು. ಅದರ ನೋವು ಇನ್ನೂ ಆಗೇ ಇದೆ. ಇದೀಗ ಈ ಟಗರು ಅಮಿತ್ ಶಾ ಮತ್ತು ಯಡಿಯೂರಪ್ಪ ಅವರಿಗೆ ಗುದ್ದಿದ್ರೆ ಮೇಲೇಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಬಿಜೆಪಿ ಅಧ್ಯಕ್ಷ ಅಣ್ಣ ಅಮಿತ್ ಶಾಗೆ ಹಾಸ್ಯದಾಟಿಯಲ್ಲೇ ಟಾಂಗ್ ನೀಡಿದರು.
ಜಿಲ್ಲೆಯ ಕಕ್ಕೇರಾ ಪಟ್ಟಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಅಣ್ಣಾ ಅಮಿತ್ ಶಾ ಎನ್ನುತ್ತಲ್ಲೇ ಬಿಜೆಪಿ ಅಧ್ಯಕ್ಷರ ಕಾಲೆಳೆದರು. ಇನ್ನು ಯಡಿಯೂರಪ್ಪ ಪರಿಸ್ಥಿತಿ ಹಳೆಯ ಸಾವಿರ ಮತ್ತು 500 ರು. ನೋಟು ಆದಂತಾಗಿದೆ. ನಿಮ್ಮ ಮಗನಿಗೂ ಸೀಟ್ ಇಲ್ಲ, ನಮ್ಮಕ್ಕ ಶೋಭಾಗೂ ಸೀಟ್ ಇಲ್ಲ ಎಂದು ಬಿಎಸ್‌ವೈರನ್ನು ಛೇಡಿಸಿದರು.
