ಬೆಂಗಳೂರು (ಮೇ. 16): ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಅಮಿತ್ ಶಾ ಭೀತಿ ಶುರುವಾಗಿದೆ. 

ಎಲ್ಲಿ ನಮ್ಮ ಶಾಸಕರನ್ನ ಹೈಜಾಕ್ ಮಾಡಿಸುತ್ತಾರೋ ಅನ್ನುವ ಭಯ ಶುರುವಾಗಿದೆ.  ಕೇರಳದತ್ತ ಉಭಯ ಪಕ್ಷಗಳ ಶಾಸಕರ ಚಿತ್ತ ನೆಟ್ಟಿದೆ.  ಕೇರಳದ ಕೊಚ್ಚಿನ್ ಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.  ವಿಶೇಷ ವಿಮಾನಗಳಲ್ಲಿ ಶಾಸಕರನ್ನ ಕರೆದುಕೊಂಡು ಹೋಗುವ ಮಾಹಿತಿ ಇದೆ.  ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನ ಪ್ರತ್ಯೇಕವಾಗಿ ಬೇರೆ ಬೇರೆ ರೆಸಾರ್ಟ್’ಗಳಿಗೆ ಕರೆದುಕೊಂಡು ಹೋಗಬೇಕೋ ಅಥವಾ ಒಂದೆಡೆ ಸೇರಿಸಬೇಕೋ ಅನ್ನೋದರ ಬಗ್ಗೆ ಅಂತಿಮ ನಿರ್ಧಾರವಾಗಬೇಕಿದೆ.  ವಿಶೇಷ ಬಸ್ ಮೂಲಕ ಕರೆದುಕೊಂಡು ಹೋಗುವ ಚಿಂತನೆಯೂ ಇದೆ.

ರಾಜ್ಯ ರಾಜಕಾರಣ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.