ಸರ್ಕಾರ ರಚನೆ ಮಾಡಲು ಕೈ - ಜೆಡಿಎಸ್ ಸಜ್ಜು

Congress - JDS Preparation For Govt Formation
Highlights

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಶ್ವಾಸ ಮತ ಶನಿವಾರ ಬಿದ್ದುಹೋಗಲಿದೆ ಎಂಬ ವಿಶ್ವಾಸದಲ್ಲಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಕೂಟ ಮುಂದೆ ತಾವು ಅಧಿಕಾರ ಪಡೆದರೆ ಏನೇನು ಮಾಡಬೇಕು ಎಂಬ ರೂಪರೇಷೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ.
 

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಶ್ವಾಸ ಮತ ಶನಿವಾರ ಬಿದ್ದುಹೋಗಲಿದೆ ಎಂಬ ವಿಶ್ವಾಸದಲ್ಲಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಕೂಟ ಮುಂದೆ ತಾವು ಅಧಿಕಾರ ಪಡೆದರೆ ಏನೇನು ಮಾಡಬೇಕು ಎಂಬ ರೂಪರೇಷೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ ವಿಶ್ವಾಸಮತಕ್ಕೆ ಸೋಲು ಉಂಟಾದರೆ, ಕೂಡಲೇ ರಾಜ್ಯ ಪಾಲರು ಕಾಂಗ್ರೆಸ್ ಬೆಂಬಲ  ಪಡೆದಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡುತ್ತಾರೆ. ಹೀಗಾದಲ್ಲಿ ಕುಮಾರಸ್ವಾಮಿ ಅವರು ಸೋಮವಾರವೇ ಪ್ರಮಾಣ ವಚನ ಸ್ವೀಕಾರ ಮಾಡುವರು ಮತ್ತು ಬುಧವಾರ ಮತ್ತೆ ವಿಧಾನಸಭೆ ಅಧಿವೇಶನ ಆಯೋಜಿಸಿ ಕುಮಾರ ಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ ಎಂದು ಮೂಲಗಳು ಹೇಳುತ್ತವೆ. 

ಅಲ್ಲದೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಷರತ್ತಿನ ಮೇರೆಗೆ ಕಾಂಗ್ರೆಸ್ ಕೂಡ ಸರ್ಕಾರದಲ್ಲಿ ಭಾಗಿಯಾಗಲಿದೆ. ಉಪ ಮುಖ್ಯಮಂತ್ರಿ ಸ್ಥಾನ ಬಹುತೇಕ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ದೊರೆಯಲಿದೆ. ಉಳಿದಂತೆ ಜೆಡಿಎಸ್ 13 ಸಚಿವ ಸ್ಥಾನ, ಕಾಂಗ್ರೆಸ್ 15 ಸಚಿವ ಸ್ಥಾನ ಮತ್ತು ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಕುರಿತು ಪ್ರಾಥಮಿಕ ಮಾತುಕತೆ ನಡೆದಿದೆ ಎಂದು
ಮೂಲ ಗಳು ಹೇಳಿವೆ 

loader