ಐವರು ಬಿಜೆಪಿ ಶಾಸಕರ ಸೆಳೆಯಲು ಕಾಂಗ್ರೆಸ್ - ಜೆಡಿಎಸ್ ಆಪರೇಷನ್

Congress, JDS Poaching BJP MLAs
Highlights

ಬಿಜೆಪಿಯ ಆಪರೇಷನ್‌ಗೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ಬಿಜೆಪಿ ಶಾಸಕರ ‘ಆಪರೇಷನ್‌ಗೆ’ ಇಳಿದಿದ್ದು, ಬಿಜೆಪಿಯ ಐವರು ಶಾಸಕರನ್ನು ಸೆಳೆಯುವ ಪ್ರಯತ್ನ ಆರಂಭಿಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರು (ಮೇ 17): ಬಿಜೆಪಿಯ ಆಪರೇಷನ್‌ಗೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ಬಿಜೆಪಿ ಶಾಸಕರ ‘ಆಪರೇಷನ್‌ಗೆ’ ಇಳಿದಿದ್ದು, ಬಿಜೆಪಿಯ ಐವರು ಶಾಸಕರನ್ನು ಸೆಳೆಯುವ ಪ್ರಯತ್ನ ಆರಂಭಿಸಿದೆ ಎಂದು ತಿಳಿದುಬಂದಿದೆ.

ಜೆಡಿಎಸ್-ಕಾಂಗ್ರೆಸ್ ನಾಯಕರು ಬುಧವಾರ ಈಗಲ್‌ಟನ್ ರೆಸಾರ್ಟ್‌ನಲ್ಲಿ ಸಭೆ ನಡೆಸಿ ಶಾಸಕರನ್ನು ಸೆಳೆಯುವ ತೀರ್ಮಾನ ಕೈಗೊಂಡರು ಮತ್ತು ತಕ್ಷಣ ಕಾರ್ಯಪ್ರವೃತ್ತರಾಗಿ ಬಿಜೆಪಿಯ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಧಾರವಾಡ ಶಾಸಕ ಅಮೃತ್ ದೇಸಾಯಿ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಮಸಾಲೆ ಜಯರಾಂ ಅವರೊಂದಿಗೆ ಪ್ರಾಥಮಿಕ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. 

ಬಿಜೆಪಿಯು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ನೀಡಿದೆ ಎನ್ನಲಾದ ಆಹ್ವಾನದ ಮಾದರಿಯಲ್ಲೇ ಬಿಜೆಪಿ ಶಾಸಕರಿಗೂ ಆಮಿಷಗಳನ್ನು ನೀಡಲಾಗಿದೆ ಎನ್ನಲಾಗುತ್ತಿದೆ. ಇದು ಪ್ರಾಥಮಿಕ ಹಂತದ ಮಾತು ಕತೆಯಾಗಿದ್ದು, ಬಿಜೆಪಿಯಿಂದ ಸೆಳೆಯಬಹುದಾದ ಇನ್ನಷ್ಟು  ಶಾಸಕರನ್ನು ಪಟ್ಟಿ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ. 

loader