ಮತ್ತೊಂದು ಹೈಡ್ರಾಮಾಕ್ಕೆ ಸುಪ್ರೀಂ ಕೋರ್ಟ್ ಸಾಕ್ಷಿಯಾಗುತ್ತಾ?

Congress JDS Moves SC Over Interim Speaker
Highlights

  • ಹಂಗಾಮಿ ಸ್ಪೀಕರ್ ಬೋಪಯ್ಯ ಆಯ್ಕೆ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂಗೆ ಅರ್ಜಿ
  • ಸುಪ್ರೀಂ ಕೋರ್ಟ್ ಒಳಗೆ ವಕೀಲರ ಪ್ರವೇಶಕ್ಕೆ ಭದ್ರತಾ ಸಿಬ್ಬಂದಿ ನಕಾರ
  • ಸುಪ್ರೀಂ ಕೋರ್ಟ್ ಭದ್ರತಾ ಸಿಬ್ಬಂದಿ -ಕಾಂಗ್ರೆಸ್ ವಕೀಲರ ವಾಗ್ವಾದ

 

ಬೆಂಗಳೂರು/ನವದೆಹಲಿ: ಇತ್ತ ಶತಾಯಗತಾಯ ಅಧಿಕಾರ ಉಳಿಸಿಕೊಳ್ಳಬೇಕೆಂದು ಬಿಜೆಪಿ ಮಾಸ್ಟರ್ ಪ್ಲಾನ್ ಹೆಣೆದು, ಹಂಗಾಮಿ ಸ್ಪೀಕರ್ ಆಗಿ ಕೆ.ಜೆ.ಬೋಪಯ್ಯ ನೇಮಕ ಮಾಡಿದೆ.

ಅತ್ತ ಕಾಂಗ್ರೆಸ್, ಜೆಡಿಎಸ್ ಮಾತ್ರ ಹಂಗಾಮಿ ಸ್ಪೀಕರ್ ನೇಮಕವನ್ನು ಪ್ರಶ್ನಿಸಿ ಮತ್ತೊಮ್ಮೆ ಸುಪ್ರೀಂ ಕದ ತಟ್ಟಿದೆ.  ಹೀಗಾಗಿ ಇಂದು ಕೂಡಾ  ಸುಪ್ರೀಂ ಕೋರ್ಟ್ ಆವರಣ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. 

ಕಾಂಗ್ರೆಸ್ ಪರ ವಕೀಲರು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್‌ಗೆ ಅರ್ಜಿ ಸಲ್ಲಿಸಿದ್ದು,  ಅರ್ಜಿಯನ್ನು ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸಲ್ಲಿಸಲು ತೆರಳಿದ್ದಾರೆ.

ಇತ್ತ ಸುಪ್ರೀಂ ಕೋರ್ಟ್ ಒಳಗೆ  ಪ್ರವೇಶಕ್ಕೆ ತಡೆಯೊಡ್ಡಿದ ಭದ್ರತಾ ಸಿಬ್ಬಂದಿ ಜತೆ ವಕೀಲರು ವಾಗ್ವಾದಕ್ಕಿಳಿದ ಘಟನೆ ನಡೆದಿದೆ. 

ಹೀಗಾಗಿ ಇಂದು  ಸುಪ್ರೀಂ ಕೋರ್ಟ್ ಮಧ್ಯರಾತ್ರಿಯೇ ಅರ್ಜಿ ವಿಚಾರಣೆ ಕೈಗೊಳ್ಳುವ ಸಾಧ್ಯತೆ ಇದೆ. 

loader