Asianet Suvarna News Asianet Suvarna News

ಯಾದಗಿರಿ : ಕಾಂಗ್ರೆಸ್ ಭದ್ರಕೋಟೆಯನ್ನು ಒಡೆಯುತ್ತಾ ಬಿಜೆಪಿ

ಹೊಸ ಜಿಲ್ಲೆಯಾಗಿ ಘೋಷಣೆಯಾದ ನಂತರ ಯಾದಗಿರಿ ಎದುರಿಸುತ್ತಿರುವ ಎರಡನೇ ವಿಧಾನಸಭೆ ಚುನಾವಣೆ ಇದಾಗಿದ್ದು, ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್ ಒಳಗೊಂಡಂತೆ ೪ ವಿಧಾನಸಭಾ
ಕ್ಷೇತ್ರಗಳನ್ನು ಹೊಂದಿದೆ. ಕಳೆದ ಬಾರಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯನ್ನು ಕಾಂಗ್ರೆಸ್ ತನ್ನ ಭದ್ರಕೋಟೆಯಾಗಿ ಮಾಡಿಕೊಂಡಿತ್ತು. ಈ ಬಾರಿ ಆ ಕೋಟೆ ಅಲುಗಾಡಲಿದೆಯೋ ಅಥವಾ
ಇನ್ನಷ್ಟು ಭದ್ರವಾಗಲಿದೆಯೋ ಎಂಬ ಕುತೂಹಲವಿದೆ. ಜಿಲ್ಲೆಯಲ್ಲಿ ಪಕ್ಷಕ್ಕಿಂತಲೂ ವ್ಯಕ್ತಿ ಪ್ರತಿಷ್ಠೆಯೇ ಮುಖ್ಯವಾಗಿವೆ. 

Congress Is The Main Party In Yadgir

ಹೊಸ ಜಿಲ್ಲೆಯಾಗಿ ಘೋಷಣೆಯಾದ ನಂತರ ಯಾದಗಿರಿ ಎದುರಿಸುತ್ತಿರುವ ಎರಡನೇ ವಿಧಾನಸಭೆ ಚುನಾವಣೆ ಇದಾಗಿದ್ದು, ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್ ಒಳಗೊಂಡಂತೆ ೪ ವಿಧಾನಸಭಾ
ಕ್ಷೇತ್ರಗಳನ್ನು ಹೊಂದಿದೆ. ಕಳೆದ ಬಾರಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯನ್ನು ಕಾಂಗ್ರೆಸ್ ತನ್ನ ಭದ್ರಕೋಟೆಯಾಗಿ ಮಾಡಿಕೊಂಡಿತ್ತು. ಈ ಬಾರಿ ಆ ಕೋಟೆ ಅಲುಗಾಡಲಿದೆಯೋ ಅಥವಾ
ಇನ್ನಷ್ಟು ಭದ್ರವಾಗಲಿದೆಯೋ ಎಂಬ ಕುತೂಹಲವಿದೆ. ಜಿಲ್ಲೆಯಲ್ಲಿ ಪಕ್ಷಕ್ಕಿಂತಲೂ ವ್ಯಕ್ತಿ ಪ್ರತಿಷ್ಠೆಯೇ ಮುಖ್ಯವಾಗಿವೆ. 

ಯಾದಗಿರಿ : ಕಾಂಗ್ರೆಸ್‌ನ ಹಾಲಿ ಶಾಸಕ ಮಾಲಕರೆಡ್ಡಿ, ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ ಮತ್ತು ಜೆಡಿಎಸ್‌ನ ಕಾಡ್ಲೂರ್ ನಡುವೆ ಪೈಪೋಟಿಯಿದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬಂದರೂ ಹೋರಾಟ ಇರುವುದು ಕಾಂಗ್ರೆಸ್  ಮತ್ತು ಬಿಜೆಪಿ ನಡುವೆ. ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ನಿರೀಕ್ಷಿಸಿದ ಮಟ್ಟಕ್ಕೆ ಅಭಿವೃದ್ಧಿ ಮಾಡಿಲ್ಲ ಎಂಬ ದೂರು ಇದೆ. ಜತೆಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಚಟುವಟಿಕೆಯಿಂದ ದೂರ ಉಳಿದು, ಕಾರ್ಯಕರ್ತರನ್ನು ಕಡೆಗಣಿಸಿದ್ದು ಮಾಲಕರೆಡ್ಡಿ ಅವರಿಗೆ ಮುಳುವಾಗಬಹುದು. ಆದರೆ ಜನರೊಂದಿಗೆ ಬೆರೆಯುವ ಗುಣ, ಸೌಮ್ಯ ಸ್ವಭಾವ ಮತ್ತು ಸರಳ ಸಜ್ಜನಿಕೆ ಮಾಲಕರೆಡ್ಡಿ ಪಾಲಿಗೆ ಪ್ಲಸ್ ಆಗಬಹುದು. ಗುರುಮಠಕಲ್ ಕ್ಷೇತ್ರದಲ್ಲಿ  ಗುರುತಿಸಿಕೊಂಡಿದ್ದ ವೆಂಕಟರೆಡ್ಡಿ ಮುದ್ನಾಳ ಅವರು ಮಾಲಕರೆಡ್ಡಿ ಮಣಿಸಲು ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರ ತಂದೆ ದಿ. ವಿಶ್ವನಾಥ ರೆಡ್ಡಿ ಮುದ್ನಾಳ ಮಾಜಿ ಸಚಿವರಾಗಿ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವುದು ಅನುಕೂಲ. ಜೆಡಿಎಸ್ ಅಭ್ಯರ್ಥಿ ಅನುಕಂಪದ ನಿರೀಕ್ಷೆಯಲ್ಲಿದ್ದಾರೆ.

ಗುರು ಮಠಕಲ್ : ಹಾಲಿ ಶಾಸಕ ಕಾಂಗ್ರೆಸ್‌ನ ಬಾಬುರಾವ್ ಚಿಂಚನಸೂರ್, ಜೆಡಿಎಸ್‌ನ ನಾಗನಗೌಡ ಕಂದಕೂರ ಮತ್ತು ಬಿಜೆಪಿಯ ಸಾಯಿಬಣ್ಣ ಬೋರಬಂಡಾ ನಡುವೆ ತ್ರಿಕೋನ ಸ್ಪರ್ಧೆ ಇದೆ. ಈ ಮೊದಲು ಎಸ್ಸಿ ಮೀಸಲು ಕ್ಷೇತ್ರವಾಗಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿಂದ ಸತತ ೮ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಪ್ರಭಾವ ಕುಂದಿಲ್ಲ. ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಅಭಿವೃದ್ಧಿ ಆಗದೇ ಇರುವುದು ಮತ್ತು ಕಬ್ಬಲಿಗ ಸಮಾಜದಿಂದ ಬಿಜೆಪಿಯಿಂದ ಬೋರಬಂಡಾ ಸ್ಪರ್ಧಿಸುತ್ತಿರುವುದು ಚಿಂಚನಸೂರ್ ಅವರಿಗೆ ಮೈನಸ್ ಆಗಬಹುದು. ಖರ್ಗೆ ಪ್ರಭಾವ ಮತ್ತು ಜನರೊಂದಿಗೆ ಚಿಂಚನಸೂರ್ ಬಾಂಧವ್ಯ ಬೆಳೆಸಿ ಕೊಂಡಿರುವುದು ಪ್ಲಸ್. ಕ್ಷೇತ್ರದಲ್ಲಿ ಹೆಚ್ಚಿರುವ ಗಂಗಾಮತ ಕೋಲಿ (ಕಬ್ಬಲಿಗ) ಸಮಾಜದ ಮತಗಳು ಬಿಜೆಪಿ ಅಭ್ಯರ್ಥಿ ಬೋರಬಂಡಾ ಅವರಿಗೆ ಪ್ಲಸ್ ಆಗಬಹುದು. ಸಂಘಟನೆಯ ಕೊರತೆ ಅಡೆತಡೆಯಾಗಬಹುದು. ಕಳೆದ ಬಾರಿ ೨ನೇ ಸ್ಥಾನ ಪಡೆದಿದ್ದ ಕಂದಕೂರ ಶತಾಯ ಗತಾಯ ಗೆಲುವಿಗೆ ಯತ್ನಿಸುತ್ತಿದ್ದು, ತಳಮಟ್ಟದಲ್ಲಿ ಪಕ್ಷ ಸಂಘಟಿಸಿದ್ದಾರೆ.

ಸುರಪುರ : ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಮತ್ತು ಜೆಡಿಎಸ್‌ನ ರಾಜಾ ಕೃಷ್ಣಪ್ಪ ನಾಯಕ ಕಣಕ್ಕಿಳಿದಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇಲ್ಲಿ ಪ್ರತಿ ಬಾರಿಯಂತೆ ನೇರ ಪೈಪೋಟಿ ಇದೆ. ಮತದಾರರು ಒಂದು ಬಾರಿ ಕಾಂಗ್ರೆಸ್, ಇನ್ನೊಂದು ಬಾರಿ ಬಿಜೆಪಿ ಗೆಲ್ಲಿಸುತ್ತಾ ಬಂದಿದ್ದಾರೆ. ಈ ಲೆಕ್ಕಾಚಾರದ ಮೇಲೆ ಈ ಬಾರಿ
ಬಿಜೆಪಿ ಸರದಿ ಎನ್ನುವುದು ರಾಜುಗೌಡರ ಹುಮ್ಮಸ್ಸು ಹೆಚ್ಚಿಸಿದೆ. ಐದು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಕೈಹಿಡಿಯಬಹುದು ಎನ್ನುವ ನಿರೀಕ್ಷೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಇಟ್ಟುಕೊಂಡಿದ್ದಾರೆ. ಸುರಪುರ ಸಂಸ್ಥಾನದ ಯುವರಾಜ ಕೃಷ್ಣಪ್ಪ ನಾಯಕ ಪ್ರಪ್ರಥಮ ಬಾರಿಗೆ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದು, ಕ್ಷೇತ್ರದಿಂದ ಜೆಡಿಎಸ್ ಖಾತೆ ತೆರೆವ ಪ್ರಯತ್ನ ನಡೆಸುತ್ತಿದ್ದಾರೆ. ಕ್ಷೇತ್ರದಿಂದ ನಾಯಕ ಸಮುದಾಯದವರೇ ಆರಿಸಿ
ಬರುತ್ತಿದ್ದರೂ ಕುರುಬ ಸಮುದಾಯದವರು ಈ ಕ್ಷೇತ್ರದಲ್ಲಿ ಬಹುಸಂಖ್ಯಾತರು.

ಶಹಾಪುರ : ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಇದೆ ಎನ್ನಲಾಗುತ್ತಿದೆಯಾದರೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. ರಾಜ್ಯದಲ್ಲಿ ಹಿಂದಿನ ಬಾರಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಹಿಡಿದರೆ ಇಲ್ಲಿ ಆ ಪಕ್ಷದ ಅಭ್ಯರ್ಥಿ ದರ್ಶನಾಪುರ ಸೋಲುಂಡಿದ್ದರು. ಒಂದು ವೇಳೆ ಗೆದ್ದಿದ್ದರೆ ಮಂತ್ರಿಯಾಗುತ್ತಿದ್ದರು ಎನ್ನುವ ಕೊರಗು ಅಭಿಮಾನಿಗಳನ್ನು ಕಾಡಿತ್ತು. ಹೀಗಾಗಿ ದರ್ಶನಾಪುರ ಈ ಬಾರಿ ಹೊಸ ತಂತ್ರಗಾರಿಕೆಯನ್ನು
ಮುಂದಿಟ್ಟುಕೊಂಡು ಮತದಾರರ ಒಲವು ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಹಾಲಿ ಶಾಸಕ ಗುರು ಪಾಟೀಲ ಶಿರವಾಳ ತಮ್ಮ ಅವಧಿಯಲ್ಲಿ ಕ್ಷೇತ್ರದಾದ್ಯಂತ ಮಾಡಿದ ಹಲವು ಕಾಮಗಾರಿಗಳು ಕೈ ಹಿಡಿಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಸದಾಕಾಲ ಕ್ಷೇತ್ರದಲ್ಲಿ ಜನಸಾಮಾನ್ಯರನ್ನು ಭೇಟಿಯಾಗುವ ಇವರ ಕಾರ್ಯವೈಖರಿ ಹಲವರ ಮನಗೆದ್ದಿದೆ. ದಶಕಗಳಿಂದ ದರ್ಶನಾಪುರ ಮತ್ತು ಶಿರವಾಳ ಕುಟುಂಬದ ನಡುವೆಯೇ ಪರಸ್ಪರ ಪೈಪೋಟಿ
ನಡೆಯುತ್ತಿದೆ. ಈ ಬಾರಿ ಜೆಡಿಎಸ್ ಅಭ್ಯರ್ಥಿ ಜಾದೂ ಮಾಡುತ್ತಾರಾ ನೋಡಬೇಕು.

Follow Us:
Download App:
  • android
  • ios