ಚುನಾವಣಾ ಫಲಿತಾಂಶದ ಬಗ್ಗೆ ಗುಪ್ತಚರ ಇಲಾಖೆ ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದೆ.  93 ರಿಂದ 110 ಸ್ಥಾನಗಳನ್ನು  ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಎಂದು  ಅಧಿಕಾರಿಗಳು  ವರದಿ ನೀಡಿದ್ದಾರೆ.  ಗುಪ್ತಚರ ಇಲಾಖೆಯ ಮಾಹಿತಿಯಿಂದ ಸಿಎಂ ಸಿದ್ಧರಾಮಯ್ಯ ಮತ್ತಷ್ಟು ಉತ್ಸಾಹಿತರಾಗಿದ್ದಾರೆ. 

ಬೆಂಗಳೂರು (ಮೇ. 14): ಚುನಾವಣಾ ಫಲಿತಾಂಶದ ಬಗ್ಗೆ ಗುಪ್ತಚರ ಇಲಾಖೆ ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದೆ. 93 ರಿಂದ 110 ಸ್ಥಾನಗಳನ್ನು ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯಿಂದ ಸಿಎಂ ಸಿದ್ಧರಾಮಯ್ಯ ಮತ್ತಷ್ಟು ಉತ್ಸಾಹಿತರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

70 ರಿಂದ 80 ಮಾತ್ರ ಬಿಜೆಪಿ ಗೆಲ್ಲಲಿದೆ. 30 ರಿಂದ 35 ಜೆಡಿಎಸ್​​ ಗೆಲ್ಲಲಿದೆ ಎಂದು ವರದಿ ನೀಡಿದೆ. ಮತದಾನದ ನಂತರ ರಾಜ್ಯಾದ್ಯಂತ ಎಕ್ಸಿಟ್​​ ಪೋಲ್​​ ನಡೆಸಿದ ಗುಪ್ತಚರ ಇಲಾಖೆ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದೆ. 

ಮೇ 12 ರ ರಾತ್ರಿ 1 ಗಂಟೆಯವರೆಗೆ ಗೃಹ ಇಲಾಖೆಯ ಮಾಜಿ ಸಲಹೆಗಾರ ಕೆಂಪಯ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್​ ಹೊರಹೊಮ್ಮಲಿದೆ ಎಂದು ವರದಿ ನೀಡಲಾಗಿದ್ದು ಸಿದ್ದರಾಮಯ್ಯ ಫುಲ್ ಖುಷಿಯಲ್ಲಿದ್ದಾರೆ.