ಸುರೇಶ್ ಕುಮಾರ್’ಗೆ ಸೋಲಿನ ಭಯ ಕಾಡ್ತಾ ಇದೆಯಾ?

First Published 10, May 2018, 12:44 PM IST
Congress Candidate Padmavathi Press Meet
Highlights

ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಮಗಳು ದಿಶಾ ಹಣ ಹಂಚಿಕೆ ಆರೋಪ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಪದ್ಮಾವತಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ.  ಸಮೃದ್ದಿ ಡೆವಲಪರ್ಸ್ ಎಂಬ ಬೋರ್ಡ್ ಇರುವ ಕಚೇರಿಯಲ್ಲಿ ದಿಶಾ ಹಣ ಹಂಚುವ ವೇಳೆ ಸಿಕ್ಕಿಬಿದ್ದಿದ್ದಾರೆ. 

ಬೆಂಗಳೂರು (ಮೇ. 10): ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಮಗಳು ದಿಶಾ ಹಣ ಹಂಚಿಕೆ ಆರೋಪ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಪದ್ಮಾವತಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ. 

ಸಮೃದ್ದಿ ಡೆವಲಪರ್ಸ್ ಎಂಬ ಬೋರ್ಡ್ ಇರುವ ಕಚೇರಿಯಲ್ಲಿ ದಿಶಾ ಹಣ ಹಂಚುವ ವೇಳೆ ಸಿಕ್ಕಿಬಿದ್ದಿದ್ದಾರೆ.  ಹಣ ಹಂಚಿರುವ ವೀಡಿಯೋ ಇದ್ರೂ, ಹಣ ಸೀಜ್ ಮಾಡಿದ್ರೂ ಸುರೇಶ್ ಕುಮಾರ್ ಹಾಗೂ ಮಗಳು ತಪ್ಪೊಪ್ಪಿಕೊಂಡಿಲ್ಲ. ಸುರೇಶ್ ಕುಮಾರ್’ಗೆ ಈ ಬಾರಿ ಸೋಲುವ ಭಯ ಕಾಡುತ್ತಿದೆ.  ಈ ಹಿಂದೆಯೂ ಎದುರಾಳಿಗಳ ಬಗ್ಗೆ ಅಪಪ್ರಚಾರ ಮಾಡಿದ್ದರು.  ಸುರೇಶ್ ಕುಮಾರ್​ಗೆ ಸೋಲುವ ಹತಾಶೆ ಭಾವ ಕಾಡುತ್ತಿದೆ.  ಹೀಗಾಗಿ ಹೆಣ್ಣು ಮಕ್ಕಳ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಪದ್ಮಾವತಿ ಆರೋಪಿಸಿದ್ದಾರೆ.   

ಕೃಷ್ಣಮೂರ್ತಿ ದಿಶಾ ಮೇಲೆ ಯಾವುದೇ ದೌರ್ಜನ್ಯ ಮಾಡಿಲ್ಲ. ಸಿಸಿಟಿವಿ ದೃಶ್ಯದಲ್ಲಿ ನೋಡಿದ್ರೆ ನಿಜಾಂಶ ತಿಳಿಯುತ್ತೆ.  ಈಗಾಗಲೇ ಚುನಾವಣಾ ಆಯೋಗಕ್ಕೆ ನಿನ್ನೆ ದೂರು ನೀಡಲಾಗಿದೆ.

ಮಾಜಿ ಕಾನೂನು ಸಚಿವರ ಮಗಳೇ ಈ ರೀತಿ ಮಾಡಿರೋದು ಶೋಚನೀಯ.  ಈ ಹಿಂದೆ 2008 ರಲ್ಲಿ ನನಗೆ ಅಪಪ್ರಚಾರ ಮಾಡುವ ಪ್ರಯತ್ನ ಮಾಡಿದ್ರು. ಆಗ ಸುರೇಶ್ ಕುಮಾರ್ ಕಡೆಯವರು ಹಣ ಹಂಚಿಕೆ ಮಾಡಿರುವ ದಾಖಲೆ ಇಂದಿಗೂ ಇದೆ. ನಿನ್ನೆಯೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ ಎಂದು ಪದ್ಮಾವತಿ ಹೇಳಿದ್ದಾರೆ. 

loader