ಎಚ್‌ಡಿಕೆ ಪ್ರಮಾಣ ವಚನವೇ ಅನುಮಾನ : ಈಶ್ವರಪ್ಪ

Cong.-JDS alliance will collapse in three months: Eshwarappa
Highlights

ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಸೇರಿಕೊಂಡಿದ್ದಾರೆ. ಕುಮಾರಸ್ವಾಮಿ ಹಾಗೂ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೋ, ಇಲ್ಲವೊ ಎಂಬ ಅನುಮಾನ ಇದೆ. ಒಂದು ವೇಳೆ ಪ್ರಮಾಣ ವಚನ ಸ್ವೀಕರಿಸಿದರೂ 3 ತಿಂಗಳೂ ಈ ಸರ್ಕಾರ ಉಳಿಯುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. 

ಮೈಸೂರು (ಮೇ 22): ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮೈತ್ರಿ ಸರ್ಕಾರ ಇನ್ನು ಮೂರೇ ತಿಂಗಳಲ್ಲಿ ಪತನವಾಗಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಬಹುಮತ ತೋರಿಸುವಲ್ಲಿ ನಾವು ವಿಫಲರಾಗಿದ್ದೇವೆ. 

ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಸೇರಿಕೊಂಡಿದ್ದಾರೆ. ಕುಮಾರಸ್ವಾಮಿ ಹಾಗೂ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೋ, ಇಲ್ಲವೊ ಎಂಬ ಅನುಮಾನ ಇದೆ. ಒಂದು ವೇಳೆ ಪ್ರಮಾಣ ವಚನ ಸ್ವೀಕರಿಸಿದರೂ 3 ತಿಂಗಳೂ ಈ ಸರ್ಕಾರ ಉಳಿಯುವುದಿಲ್ಲ ಎಂದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ ಎಂಬ ಕೊರಗು ಬೇಡ ಎಂದು ಮನವಿ ಮಾಡಿದರು.

ಶೀಘ್ರ ಮೈತ್ರಿ ಪತನ :  ಶೀಘ್ರ ಮೈತ್ರಿ ಸರ್ಕಾರ ಪತನ ಪ್ರಮಾಣ ವಚನಕ್ಕೂ ಮೊದಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಶೀಘ್ರ ಸರ್ಕಾರ ಬೀಳಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಭವಿಷ್ಯ ನುಡಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕೈ-ದಳ ಮೈತ್ರಿಯ ರಾಜಕೀಯ ದೊಂಬರಾಟ ನೋಡುವುದು ಅನಿವಾರ್ಯ. 

ಉಪ ಮುಖ್ಯಮಂತ್ರಿ, ಮಂತ್ರಿ ಸ್ಥಾನಕ್ಕೆ ಈಗಲೇ ಕಿತ್ತಾಡಿಕೊಳ್ಳುತ್ತಿದ್ದಾರೆ. ಜಾತಿ, ಧರ್ಮವನ್ನು ಒಡೆದ ಸಿದ್ದರಾಮಯ್ಯಗೆ ಜನತೆ ಬುದ್ಧಿ ಕಲಿಸಲಿದ್ದಾರೆ. ಕೇವಲ 38 ಶಾಸಕರಿದ್ದಜೆಡಿಎಸ್‌ಗೆ ಕೆಂಪುಹಾಸು ಹಾಸಿದ್ದು ಕಾಂಗ್ರೆಸ್‌ನ ಅಧಿಕಾರಿದ ದುರಾಸೆಗೆ ಸಾಕ್ಷಿಯಾಗಿದೆ ಎಂದುವಾಗ್ದಾಳಿ ನಡೆಸಿದರು.

loader