ನೀತಿ ಸಂಹಿತೆ ಉಲ್ಲಂಘನೆ : ಹ್ಯಾರಿಸ್ ವಿರುದ್ಧ ದೂರು

Complaint Lodge Aginst MLA Haris
Highlights

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶಾಸಕ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಎ.ಹ್ಯಾರಿಸ್ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶಾಸಕ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಎ.ಹ್ಯಾರಿಸ್ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚುನಾವಣಾ ಸಂಚಾರ ದಳದ ಅಧಿಕಾರಿ ನೀಡಿದ ದೂರಿನ ಮೇರೆಗೆ ಹ್ಯಾರಿಸ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಏ.23 ರಂದು ಹ್ಯಾರಿಸ್ ತಮ್ಮ ಬೆಂಬಲಿಗರ ಜತೆ ನಾಮಪತ್ರ ಸಲ್ಲಿಸುವ ವೇಳೆ ಧ್ವನಿ ವರ್ಧಕ ಬಳಸಿದ್ದರು. 
ಧ್ವನಿ ವರ್ಧಕ ಬಳಕೆಗೆ ಯಾವುದೇ ಅನುಮತಿ ಪಡೆದಿರಲಿಲ್ಲ. ವಾಹನ ತಡೆದ ಚುನಾವಣಾ ಸಂಚಾರ ದಳದ ಅಧಿಕಾರಿ ಧ್ವನಿ ವರ್ಧಕ ತೆರವುಗೊಳಿಸಿ ದೂರು ನೀಡಿದ್ದರು. ಅವರು ನೀಡಿದ ದೂರಿನ ಮೇರೆಗೆ ವಾಹನ ಜಪ್ತಿಗೊಳಿಸಿ ವಾಹನದ ಮಾಲೀಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

loader