ಕೊಪ್ಪಳ ಕಾಂಗ್ರೆಸ್ ಶಾಸಕರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು

Compalint Aginst Koppal Congres MLA
Highlights

ಕೊಪ್ಪಳ ಕಾಂಗ್ರೆಸ್ ಶಾಸಕ ರಹೀಂ ಖಾನ್ ಬೆಂಬಲಿಗರ ವಿರುದ್ಧ 2 ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ರಹೀಂ ಖಾನ್ ಬೆಂಬಲಿಗರು ತಾವು ನಾಮಪತ್ರ ವಾಪಸ್ ಪಡೆಯಲು ಬೆದರಿಕೆ ಹಾಕಿದ್ದಲ್ಲದೇ ಅವರಿಂದ 50 ಲಕ್ಷ ಪಡೆದಿದ್ದೇನೆ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು  ಎಂಇಪಿ ಅಭ್ಯರ್ಥಿ ನಾಸೀರ್ ಖಾನ್ ದೂರಿದ್ದಾರೆ. 

ಕೊಪ್ಪಳ : ಕೊಪ್ಪಳ ಕಾಂಗ್ರೆಸ್ ಶಾಸಕ ರಹೀಂ ಖಾನ್ ಬೆಂಬಲಿಗರ ವಿರುದ್ಧ 2 ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ.  
ರಹೀಂ ಖಾನ್ ಬೆಂಬಲಿಗರು ತಾವು ನಾಮಪತ್ರ ವಾಪಸ್ ಪಡೆಯಲು ಬೆದರಿಕೆ ಹಾಕಿದ್ದಲ್ಲದೇ ಅವರಿಂದ 50 ಲಕ್ಷ ಪಡೆದಿದ್ದೇನೆ ಎಂದು ಅಪಪ್ರಚಾರ ಮಾಡಿದ್ದಾರೆ ಎಂದು  ಎಂಇಪಿ ಚುನಾವಣಾ ಅಭ್ಯರ್ಥಿ ನಾಸೀರ್ ಖಾನ್ ದೂರಿದ್ದಾರೆ. 
 ಶಾಸಕ ರಹೀಮ್ ಖಾನ್ ಬೆಂಬಲಿಗರಾದ ರೀಯಾಜ್, ಜುಬೇರ್, ಸೈಫುಲ್ ಖಾದರಿ ಅಕ್ಬರ್ ಗಾದಗಿ ನಾಮಪತ್ರ ವಾಪಸ್ ಪಡೆಯದಿದ್ದರೆ ಹಲ್ಲೆ ಮಾಡುವದಾಗಿ ಬೆದರಿಕೆ  ಒಡ್ಡುತ್ತಿದ್ದಾರೆ.  ಎಂ.ಇ.ಪಿ ಪಕ್ಷದ ಅಭ್ಯರ್ಥಿ ನಾಸೀರ ಖಾನ್ 50 ಲಕ್ಷ ಹಣವನ್ನು ನಮ್ಮ ಶಾಸಕರಿಂದ ಪಡೆದುಕೊಂಡಿದ್ದಾರೆಂದು ಅಪ್ರಚಾರ ಮಾಡಲಾಗುತ್ತಿದ್ದಾರೆ ಎಂದು ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರದ ಎಂ.ಇ.ಪಿ ಅಭ್ಯರ್ಥಿಯಾಗಿರುವ ನಾಸೀರ ಖಾನ್, ಆರೋಪಿಸಿದ್ದಾರೆ.  

ಇನ್ನು  ಈ ಸಂಬಂಧ ನಾಸೀರ್ ಖಾನ್ ಕಾಂಗ್ರೆಸ್ ಶಾಸಕ ರಹೀಮ್ ಖಾನ್ ಬೆಂಬಲಿಗರಾದ ಇನಾಯಿತ್, ಫಯುಮ್ , ಮಹೇಬುಬ್ ಖಾನ್ ಹಾಗೂ ಮೊಹ್ಮದ್ ಸಿರಾಜ್ ವಿರುದ್ಧ ಖಾನ್ ಚೌಬಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಸದ್ಯ ಈ ಸಂಬಂಧ ಪ್ರಕಟಣ ದಾಖಲಿಸಿಕೊಂಡ ಚೌಬಾರ  ಪೊಲೀಸರು ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುತ್ತಿದ್ದಾರೆ.

 ಮತದಾನ ನಿಮ್ಮ ಹಕ್ಕು, ನಿಮ್ಮ ಜವಾಬ್ದಾರಿ ಕೂಡಾ | ತಪ್ಪದೇ ಮತ ಹಾಕಿ – ಮೇ 12, 2018

loader