ಮಾಜಿ ಸಿಎಂ ಕುಮಾರಸ್ವಾಮಿ ಭಾಗವಹಿಸಿದ್ದ ಪ್ರಚಾರ ಸಭೆಗೆ  ತಯಾರಿಸಲಾಗಿದ್ದ ಅಡುಗೆಯನ್ನು ಚುನಾವಣಾ ಅಧಿಕಾರಿಗಳು  ವಶಪಡಿಸಿಕೊಂಡಿದ್ದಾರೆ. 

ಶಿವಮೊಗ್ಗ (ಮೇ. 07): ಮಾಜಿ ಸಿಎಂ ಕುಮಾರಸ್ವಾಮಿ ಭಾಗವಹಿಸಿದ್ದ ಪ್ರಚಾರ ಸಭೆಗೆ ತಯಾರಿಸಲಾಗಿದ್ದ ಅಡುಗೆಯನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಥಳೀಯ ದಂಪತಿಯೋರ್ವರ ವಿವಾಹ ವಾರ್ಷಿಕೋತ್ಸವದ ನೆಪದಲ್ಲಿ ವೇದಿಕೆ ಸಮೀಪದ ಸಭಾ ಭವನದಲ್ಲಿ ಸುಮಾರು 3 ಸಾವಿರ ಜನಕ್ಕೆ ಅಡುಗೆ ತಯಾರಿಸಲಾಗಿತ್ತು. ಖಚಿತ ಮಾಹಿತಿ ಮೇಲೆ ಚುನಾವಣಾ ಸಿಬ್ಬಂದಿಗಳು ಹೊಸನಗರ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಊಟಕ್ಕೆ ಅವಕಾಶ ನೀಡದೆ ಅಡುಗೆ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಕೇಸು ದಾಖಲಿಸಿದ್ದಾರೆ. 

ಸುಮಾರು ಮೂರು ಸಾವಿರ ಜನಕ್ಕೆ ತಯಾರಿಸಲಾಗಿದ್ದ ಅಡುಗೆ ವೇಸ್ಟ್ ಆಗಿದೆ.