Asianet Suvarna News

ಮೋದಿ ಭಾಷಣ ಮಾಡಿದ ತಕ್ಷಣವೇ ಸಿದ್ದರಾಮಯ್ಯ ಕೌಂಟರ್

2 ಕಡೆ ಸ್ಪರ್ಧಿಸಿದ್ದನ್ನು ನೀವು ಮರೆತು ಬಿಟ್ಟಿದ್ದೀರಾ? ನೀವೂ ಭಯದಿಂದಲೇ 2 ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದಿರಾ? ವಾರಣಾಸಿ-ವಡೋದರಾ 2 ಕ್ಷೇತ್ರದಲ್ಲಿ ನೀವು ಸ್ಪರ್ಧಿಸಿದ್ದೇಕೆ ?ನೀವು 56 ಇಂಚಿನ ಎದೆಯುಳ್ಳವರು ತಾನೇ?

CM Siddu and Ramya Counter after Narendra Modi Speech
  • Facebook
  • Twitter
  • Whatsapp

ಬೆಂಗಳೂರು(ಮೇ.01): ವಿಧಾನಸಬಾ ಚುನಾವಣೆ ಸಮೀಪವಾಗುತ್ತಿದ್ದಂತೆ ನಾಯಕರ ಮಾತಿನ ಬಿರುಸುಬಾಣಗಳು ಹೆಚ್ಚಾಗುತ್ತಿವೆ. ಮೊದಲೆಲ್ಲ ಭಾಷಣಗಳಲ್ಲಿ ಕಾಣುಲಾಗುತ್ತಿತ್ತು. ಈಗ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿರುವುದರಿದ ಪ್ರತಿಯೊಬ್ಬರೂ ಕೂಡ ನಾಯಕರೆಲ್ಲ ಜನರಿಗೆ ಹತ್ತಿರವಾಗಿರುವ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ವಿಧಾನಸಭಾ ಚುನಾವಣಾ ಪ್ರವಾಸ ಕೈಗೊಂಡಿದ್ದು ಇಂದು ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಗ್ರಾಮದಲ್ಲಿ ಪ್ರಚಾರ ಕೈಗೊಂಡು ಭಾಷಣ ಮಾಡಿದರು. ತಮ್ಮ ಮಾತಿನ ಉದ್ದಕ್ಕೂ ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೆಗಳಿದ್ದು ಪ್ರಮುಖವಾಗಿತ್ತು. ಮೋದಿ ಭಾಷಣ ಮಾಡಿದ ತಕ್ಷಣವೇ ಸಿದ್ದರಾಮಯ್ಯ ತಮ್ಮ ಮೇಲಿನ ವಾಗ್ದಾಳಿಗೆ ಕೌಂಟರ್ ನೀಡಿದ್ದಾರೆ. 
'ಲೋಕಸಭೆ ಚುನಾವಣೆಯಲ್ಲಿ ನೀವು 2 ಕ್ಷೇತ್ರಗಳ್ಲಲಿ ಸ್ಪರ್ಧಿಸಿದ್ದೇಕೆ? 2 ಕಡೆ ಸ್ಪರ್ಧಿಸಿದ್ದನ್ನು ನೀವು ಮರೆತು ಬಿಟ್ಟಿದ್ದೀರಾ? ನೀವೂ ಭಯದಿಂದಲೇ 2 ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದಿರಾ? ವಾರಣಾಸಿ-ವಡೋದರಾ 2 ಕ್ಷೇತ್ರದಲ್ಲಿ ನೀವು ಸ್ಪರ್ಧಿಸಿದ್ದೇಕೆ ?ನೀವು 56 ಇಂಚಿನ ಎದೆಯುಳ್ಳವರು ತಾನೇ? ನಿಮ್ಮ ಬಳಿ ಇದಕ್ಕೆ ಜಾಣ ಸ್ಪಷ್ಟೀಕರಣ ಇದೆ ಎಂಬುದು ಗೊತ್ತು. ಎರಡು ಕ್ಷೇತ್ರಗಳ ವಿಷಯ ಮರೆತುಬಿಡಿ, ನಿಮ್ಮ ಪಕ್ಷ 60-70 ಸ್ಥಾನಗಳನ್ನು ದಾಟುವುದಿಲ್ಲ ಗೆಲ್ಲುವ ಬಗ್ಗೆ ತಲೆಕೆಡಿಸಿಕೊಳ್ಳಿ 'ಎಂದು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ನಾಯಕಿ ಹಾಗೂ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆ, ರಮ್ಯಾ ಕೂಡ ಟ್ವೀಟ್ ಮಾಡಿ’ ಮೋದಿಜಿ ಅವರು ತುಂಬಾ ಸುಂದರ ನೀವು ! ನಾನು ನಿಮ್ಮ ಲೋರಾ ಪಿಯಾನಾ ಜಾಕೆಟ್ ಅನ್ನು ಇಷ್ಟ ಪಡುತ್ತೇನೆ! ಅದು ಕೇವಲ 17 ಸಾವಿರ ಯೂರೋ ಮಾತ್ರ! ಅತಿ ಕಡಿಮೆ. ಇದನ್ನು ಪಾವತಿಸಲು ಯಾರ ಬಳಸುತ್ತಾರೆ’ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.  

 

Follow Us:
Download App:
  • android
  • ios