ಇದು ಯಾವ ದೇಶದ ಭಾಷೆ ಗುರೂ? ಮೋದಿ ಕನ್ನಡಕ್ಕೆ ಸಿಎಂ ವ್ಯಂಗ್ಯ

First Published 1, May 2018, 5:34 PM IST
CM Siddaramaiah Takes On PM Modi Over Kannada
Highlights

ಈ ಹಿಂದೆ ರಾಹುಲ್ ಗಾಂಧಿಯ ಕನ್ನಡವನ್ನು ವ್ಯಂಗ್ಯವಾಡಿದ್ದ ಬಿಜೆಪಿಗರಿಗೆ ಸಿಎಂ ಸಿದ್ದರಾಮಯ್ಯ ಮೋದಿ ಕನ್ನಡವನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಮೇ. 01):  ಕರ್ನಾಟಕದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರ ಕನ್ನಡ ಭಾಷಾ ಪ್ರಯೋಗವು ವಿಮರ್ಶೆಗೊಳಗಾಗುತ್ತಿದೆ. ಕಳೆದ ಮಾರ್ಚ್’ನಲ್ಲಿ ಅಥಣಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ   ರಾಹುಲ್ ಗಾಂಧಿ ಬಸವಣ್ಣನವರ ವಚನಗಳನ್ನು ಉಚ್ಛಾರಣೆ ಮಾಡಿದ ಶೈಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪ್ರಧಾನಿ ಮೋದಿಯವರ ಕನ್ನಡ ಪದಗಳ ಉಚ್ಛಾರಣೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. 

ಇಂದು ಚಾಮರಾಜನಗರದ ಸಂತೇಮಾರಹಳ್ಳಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಮಂಟೇಸ್ವಾಮಿ, ಮಲೆ ಮಹದೇಶ್ವರ, ಬಿಳಿಗಿರಿರಂಗ ಮುಂತಾದ ಪದಗಳನ್ನು ಉಚ್ಛಾರಣೆ ಮಾಡಿದ ಶೈಲಿಯನ್ನು ಸಿಎಂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಟೀಕಿಸಿದ್ದು ಹೀಗೆ....

 

loader