ಬಿಎಸ್’ವೈಗೆ ಬುದ್ದಿ ಭ್ರಮಣೆಯಾಗಿದೆ: ಸಿಎಂ

First Published 30, Apr 2018, 3:41 PM IST
CM Siddaramaiah Slams B S Yadiyurappa
Highlights

ಕಾಂಗ್ರೆಸ್'ನ  ಕೊನೆಯ ಸಿಎಂ ಸಿದ್ದರಾಮಯ್ಯ ಎಂಬ ಯಡಿಯೂರಪ್ಪ ಹೇಳಿಕೆಗೆ ಸಿಎಂ ವ್ಯಂಗ್ಯವಾಡಿದ್ದಾರೆ. 
ಯಡಿಯೂರಪ್ಪಗೆ ಬುದ್ದಿ ಭ್ರಮಣೆಯಾದಂತೆ ಕಾಣುತ್ತಿದೆ. ಅವರ ವಯಸ್ಸು ಬೇರೆ 75 ಆಗಿದೆ. ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಜೈಲಿಗೆ ಹೋದವರಿಗೆ ಜನ ಮತ ಹಾಕ್ತಾರೇನ್ರಿ?  ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

ಕಲ್ಬುರ್ಗಿ (ಏ. 30): ಕಾಂಗ್ರೆಸ್'ನ  ಕೊನೆಯ ಸಿಎಂ ಸಿದ್ದರಾಮಯ್ಯ ಎಂಬ ಯಡಿಯೂರಪ್ಪ ಹೇಳಿಕೆಗೆ ಸಿಎಂ ವ್ಯಂಗ್ಯವಾಡಿದ್ದಾರೆ. 

ಯಡಿಯೂರಪ್ಪಗೆ ಬುದ್ದಿ ಭ್ರಮಣೆಯಾದಂತೆ ಕಾಣುತ್ತಿದೆ. ಅವರ ವಯಸ್ಸು ಬೇರೆ 75 ಆಗಿದೆ. ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಜೈಲಿಗೆ ಹೋದವರಿಗೆ ಜನ ಮತ ಹಾಕ್ತಾರೇನ್ರಿ?  ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

ಸಿ- 4 ಸಮೀಕ್ಷೆ ಸಿಎಂ ಮನೆಯಲ್ಲಿ ರೆಡಿಯಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ರಾಮಯ್ಯ ಟೀಕಿಸಿದ್ದಾರೆ.  25 ಸೀಟು ಗೆಲ್ಲಲೂ ಆಗದವರ ಬಗ್ಗೆ ನಾನೇನು ಮಾತನಾಡಲಿ ? ಎಂದು ಟಾಂಗ್ ನೀಡಿದ್ದಾರೆ. 

ಇದೇ ಸಂದರ್ಭದಲ್ಲಿ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ. ಮಾಲೀಕಯ್ಯ ಕೋಮುವಾದಿಗಳ ಜೊತೆ ಸೇರಿಕೊಂಡ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.  ಕೋಮುವಾದಿಗಳ ಜೊತೆ ಸೇರಿದ ಮೇಲೆ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ ಎಂದಿದ್ದಾರೆ. 

loader