ಚುನಾವಣಾ ನೀತಿ ಸಂಹಿತೆ ಜಾರಿ ಬಳಿಕ ಸಿಎಂ ಸಿದ್ದರಾಮಯ್ಯ ಹಾಸನಕ್ಕೆ ಒಮ್ಮೆಯೂ ಬಂದಿಲ್ಲ. ಆರ್’ಟಿಒ ಅಧಿಕಾರಿಯಾಗಿದ್ದ ಬಾಗೂರು ಮಂಜೇಗೌಡ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯಗೆ ಟಿಕೆಟ್ ನೀಡಿದ್ದ ಸಿಎಂ ಆಪ್ತರ ಪರವಾಗಿ ಪ್ರಚಾರ ಮಾಡಲು ಒಮ್ಮೆಯೂ ಬಂದಿಲ್ಲ. ಡಿಕೆಶಿ ಹೊರತುಪಡಿಸಿ ರಾಜ್ಯ ಹಾಗೂ ರಾಷ್ಟ್ರೀಯ ಕೈ ನಾಯಕರು ಹಾಸನಕ್ಕೆ ಆಗಮಿಸಿಲ್ಲ.
ಬೆಂಗಳೂರು (ಮೇ. 10): ಚುನಾವಣಾ ನೀತಿ ಸಂಹಿತೆ ಜಾರಿ ಬಳಿಕ ಸಿಎಂ ಸಿದ್ದರಾಮಯ್ಯ ಹಾಸನಕ್ಕೆ ಒಮ್ಮೆಯೂ ಬಂದಿಲ್ಲ.
ಆರ್’ಟಿಒ ಅಧಿಕಾರಿಯಾಗಿದ್ದ ಬಾಗೂರು ಮಂಜೇಗೌಡ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯಗೆ ಟಿಕೆಟ್ ನೀಡಿದ್ದ ಸಿಎಂ ಆಪ್ತರ ಪರವಾಗಿ ಪ್ರಚಾರ ಮಾಡಲು ಒಮ್ಮೆಯೂ ಬಂದಿಲ್ಲ. ಡಿಕೆಶಿ ಹೊರತುಪಡಿಸಿ ರಾಜ್ಯ ಹಾಗೂ ರಾಷ್ಟ್ರೀಯ ಕೈ ನಾಯಕರು ಹಾಸನಕ್ಕೆ ಆಗಮಿಸಿಲ್ಲ.
ಬಾಗೂರು ಮಂಜೇಗೌಡಗೆ ವೃತ್ತಿಗೆ ರಾಜೀನಾಮೆ ಕೊಡಿಸಿ ಚುನಾವಣೆಗೆ ನಿಲ್ಲಿಸಿದ್ದರು. ತೀವ್ರ ಪೈಪೊಟಿ ನಡುವೆಯೂ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಹಾಗೂ ಆರ್.ಟಿ.ಓ ಅದಿಕಾರಿಯಾಗಿದ್ದ ಮಂಜೇಗೌಡಗೆ ಟಿಕೆಟ್ ನೀಡಲಾಗಿತ್ತು. ಆದರೆ ಟಿಕೆಟ್ ಕೊಟ್ಟ ಬಳಿಕ ಆಪ್ತರ ಪರವಾಗಿ ಪ್ರಚಾರ ಮಾಡಲು ಬಾರದೇ ಇರುವುದು ಅಭ್ಯರ್ಥಿಗಳಲ್ಲಿ ಬೇಸರ ಉಂಟು ಮಾಡಿದೆ.
