ಬಾದಾಮಿಯಲ್ಲಿ ಸಿಎಂಗೆ ಉಲ್ಟಾ ಹೊಡೆಯಲಿದೆಯಾ ಜಾತಿ ಲೆಕ್ಕಾಚಾರ?

First Published 29, Apr 2018, 2:22 PM IST
CM Siddaramaiah Facing Problem in Badami Constituency
Highlights

ಬಾದಾಮಿ ಮತಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯಗೆ ಅವರ ಜಾತಿಯೇ ಮುಳುವಾಗಲಿದೆ. ಜಾತಿ ಬೆಂಬಲ ಹಿಡಿದು ಬಾದಾಮಿಗೆ ಬಂದ ಸಿಎಂಗೆ ಇಲ್ಲಿ ಜಾತಿಯೇ ತಿರುಗುಬಾಣವಾಗಲಿದೆ ಎನ್ನಲಾಗುತ್ತಿದೆ. 

ಬಾಗಲಕೋಟೆ (ಏ. 29): ಬಾದಾಮಿ ಮತಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯಗೆ ಅವರ ಜಾತಿಯೇ ಮುಳುವಾಗಲಿದೆ. ಜಾತಿ ಬೆಂಬಲ ಹಿಡಿದು ಬಾದಾಮಿಗೆ ಬಂದ ಸಿಎಂಗೆ ಇಲ್ಲಿ ಜಾತಿಯೇ ತಿರುಗುಬಾಣವಾಗಲಿದೆ ಎನ್ನಲಾಗುತ್ತಿದೆ. 

ಸಿಎಂ ಸಿದ್ದರಾಮಯ್ಯ ಸೋಲಿಸಲು ಗೋವಿನ ಕೊಪ್ಪ ಗ್ರಾಮಸ್ಥರು ಪಣ ತೊಟ್ಟಿದ್ದಾರೆ.  ಗೋವಿನಕೊಪ್ಪ ಗ್ರಾಮಸ್ಥರು ಸಿಎಂ ವಿರುದ್ದ ಸ್ವ ಜಾತಿ ಪಕ್ಷಪಾತದ ಆರೋಪ ಮಾಡಿದ್ದಾರೆ.  ಮತದಾನ ಕೈಬಿಟ್ಟು ಅಕ್ಕಪಕ್ಕದ ಗ್ರಾಮಗಳಲ್ಲೂ ಸಿಎಂಗೆ ಮತ ಹಾಕದಂತೆ ಜಾಗೃತಿ ಮೂಡಿಸಿದ್ದಾರೆ. 

ಗೋವಿನಕೊಪ್ಪಕ್ಕೆ ಮಂಜೂರಾಗಿದ್ದ ಗ್ರಾಮ ಪಂಚಾಯತಿಯನ್ನು ಪಕ್ಕದ ಗ್ರಾಮಕ್ಕೆ  ಸರ್ಕಾರ ನೀಡಿತ್ತು.  ಗ್ರಾ.ಪಂ ಮಂಜೂರಾತಿಗಾಗಿ ಬೆಂಗಳೂರಿಗೆ ತೆರಳಿದ್ದ ಗ್ರಾಮಸ್ಥರಿಗೆ ನಿರಾಸೆಯಾಗಿತ್ತು.  ಗೋವಿನಕೊಪ್ಪದಲ್ಲಿ ಸಿಎಂ ಸ್ವಜಾತಿ ಮತ ಕಡಿಮೆ ಅನ್ನೋ ಕಾರಣಕ್ಕೆ ಬದಲಾವಣೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.   ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಹಾಗೂ ಸ್ಥಳೀಯ ಶಾಸಕ ಚಿಮ್ಮನಕಟ್ಟಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನ ಬಹಿಷ್ಕಾರಕ್ಕೆ ಗೋವಿನಕೊಪ್ಪ ಗ್ರಾಮಸ್ಥರು ಮುಂದಾಗಿದ್ದಾರೆ. 
 

loader