ಬಾದಾಮಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಗೌಪ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಾದಾಮಿ ಪರಿಸ್ಥಿತಿ  ಕುರಿತು ಸಮಾಲೋಚನೆ ನಡೆಸಲಾಗಿದೆ. ಬಾದಾಮಿ ಸ್ಥಳೀಯ  ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ  ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. 

ಬಾದಾಮಿ : ಬಾದಾಮಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಗೌಪ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಾದಾಮಿ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಲಾಗಿದೆ. ಬಾದಾಮಿ ಸ್ಥಳೀಯ ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ವೇಳೆ ಬಾದಾಮಿಗೆ ಮತ್ತೊಮ್ಮೆ ಪ್ರಚಾರಕ್ಕೆ ಬರಬೇಕೆಂದು ಸಿಎಂ ಬಳಿ ಸ್ಥಳೀಯ ಮುಖಂಡರು ವಿನಂತಿಸಿಕೊಂಡಿದ್ದಾರೆ. ಸ್ಥಳೀಯ ಮುಖಂಡರ ಮನವಿಗೆ ಸ್ಪಷ್ಟ ಉತ್ತರ ನೀಡದ ಸಿಎಂ, ಪರಿಸ್ಥಿತಿ ಆಧರಿಸಿ ಮತ್ತೊಮ್ಮೆ ಪ್ರಚಾರಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ಸಿಎಂ ಪ್ರಚಾರ ಮಾಡಿರುವ ಗ್ರಾಮ ಹೊರತುಪಡಿಸಿ ಉಳಿದ ಗ್ರಾಮದಲ್ಲಿ ಅಬ್ಬರದ ಪ್ರಚಾರ ನಡೆಸುವಂತೆ ಸಿಎಂ ಇದೇ ವೇಳೆ ಸೂಚನೆ ನೀಡಿದ್ದಾರೆ. ಎಸ್ ಆರ್ ಪಾಟೀಲ, ಬಿ ಬಿ ಚಿಮ್ಮನಕಟ್ಟಿ ,ಆರ್ ಬಿ ತಿಮ್ಮಾಪೂರ, ಸೇರಿದಂತೆ ಹಲವು ಮುಖಂಡರಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಗೌಪ್ಯ ಸಭೆ ಬಳಿಕ ಜಮಖಂಡಿ ಕ್ಷೇತ್ರದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. 

ಇನ್ನು ಸಿಎಂ ಅವರನ್ನು ಜಮಖಂಡಿ ಕ್ಷೇತ್ರದ ಪ್ರಚಾರಕ್ಕೆ ಮುಖಂಡರು ಆಹ್ವಾನಿಸಿದ್ದು, ಸಮಯ ಕೊರತೆ ಹಿನ್ನೆಲೆ ಮುಖಂಡರ ಮನವಿ ತಿರಸ್ಕರಿಸಿದರು.