ನರಸಿಂಹ ರಾಜ ಕ್ಷೇತ್ರದಲ್ಲಿ ಸ್ನೇಹಿತರ ಸವಾಲ್

Close Friends Competitor in Election
Highlights

ಇಪ್ಪತ್ತೈದು ವರ್ಷಗಳ ಸ್ನೇಹಿತರು ಈಗ ಎದುರಾಳಿಗಳಾಗಿದ್ದಾರೆ.  ನರಸಿಂಹ ರಾಜ ಕ್ಷೇತ್ರದಲ್ಲಿ ತನ್ವೀರ್ ಸೇಠ್ ಮುಂದೆ ತೊಡೆ ತಟ್ಟಿ ನಿಂತಿದ್ದಾರೆ ಅಬ್ದುಲ್ ಅಜೀಜ್. ಇಬ್ಬರ ನಡುವೆ 25 ವರ್ಷಗಳಿಂದ ಸ್ನೇಹವಿದೆ. ಚುನಾವಣಾ ಕಾರಣದಿಂದ ಈಗ ಇಬ್ಬರೂ ಎದುರಾಳಿಗಳಾಗಿದ್ದಾರೆ. 

ಬೆಂಗಳೂರು (ಮೇ.04): ಇಪ್ಪತ್ತೈದು ವರ್ಷಗಳ ಸ್ನೇಹಿತರು ಈಗ ಎದುರಾಳಿಗಳಾಗಿದ್ದಾರೆ.  ನರಸಿಂಹ ರಾಜ ಕ್ಷೇತ್ರದಲ್ಲಿ ತನ್ವೀರ್ ಸೇಠ್ ಮುಂದೆ ತೊಡೆ ತಟ್ಟಿ ನಿಂತಿದ್ದಾರೆ ಅಬ್ದುಲ್ ಅಜೀಜ್.

ಇಬ್ಬರ ನಡುವೆ 25 ವರ್ಷಗಳಿಂದ ಸ್ನೇಹವಿದೆ. ಚುನಾವಣಾ ಕಾರಣದಿಂದ ಈಗ ಇಬ್ಬರೂ ಎದುರಾಳಿಗಳಾಗಿದ್ದಾರೆ.  ಕಳೆದ ನಾಲ್ಕು ಚುನಾವಣೆಗಳಲ್ಲಿ ತನ್ವೀರ್ ಗೆಲ್ಲಲು ಅಬ್ದುಲ್ ಕೆಲಸ ಮಾಡಿದ್ದರು. ಈ ಬಾರಿ ಜೆಡಿಎಸ್ ನಿಂದ ಟಿಕೆಟ್ ಪಡೆದು ತನ್ವೀರ್’ಗೆ ಎದುರಾಗಿ ಸ್ಪರ್ಧೆ ಮಾಡಿದ್ದಾರೆ. 

ಕಳೆದ ಚುನಾವಣೆ ವೇಳೆಯೇ ಅಬ್ದುಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಬಾರಿ ಕುಮಾರಸ್ವಾಮಿ ಯಿಂದಲೇ ಜೆಡಿಎಸ್ ಗೆ ಬರುವಂತೆ ಆಹ್ವಾನ ಬಂದಿತ್ತು.  ಕುಮಾರಸ್ವಾಮಿ ಆಹ್ವಾನದ ಮೇರೆಗೆ ಜೆಡಿಎಸ್ ಸೇರಿ ನರಸಿಂಹ ರಾಜ ಕ್ಷೇತ್ರ ದಿಂದ ಸ್ಪರ್ಧಿಸುತ್ತಿದ್ದಾರೆ.  
 

loader