ಕೊಡಗು (ಮೇ. 10): ಗೋಣಿಕೊಪ್ಪದ ಸರ್ಕರಿ ಆಸ್ಪತ್ರೆಯಲ್ಲಿ  ಕೈ-ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ ಪ್ರಕರಣ ನಡೆದಿದೆ.  ಕಾರ್ಯಕರ್ತರ ಘರ್ಷಣೆಯಿಂದ ಆಸ್ಪತ್ರೆಯ ಆಸ್ತಿ ಪಾಸ್ತಿ ಹಾನಿಯಾಗಿದೆ. 

ಆಸ್ಪತ್ರೆಯ ಕಿಟಕಿ ಗಾಜು, ಉಪಕರಣಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ.  ಗೋಣಿಕೊಪ್ಪ ನಗರದಲ್ಲಿ ಬಿಗುವಿನ ವಾತಾವರಣದ ಸೃಷ್ಟಿಯಾಗಿದೆ.  ನಗರದಾದ್ಯಂತ ಹೈ ಅಲರ್ಟ್ ಮಾಡಲಾಗಿದೆ.  ಆಶಾಂತಿ ನಿರ್ಮಾಣವಾಗದಂತೆ ಖಾಕಿ ಸರ್ಪಗಾವಲು ಹಾಕಲಾಗಿದೆ. 

ಯುವ ಕಾಂಗ್ರೆಸ್ ಅಧ್ಯಕ್ಷ ಸೋಮಣ್ಣನಿಗೆ ಗಲಾಟೆಯಲ್ಲಿ ಗಂಭೀರ ಗಾಯಗಳಾಗಿದ್ದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.