Asianet Suvarna News Asianet Suvarna News

ನೀವು ಹಾಕಿದ ಮತ ಸರಿಯಾಗಿದೆಯಾ ನೋಡಿಕೊಳ್ಳಿ

ಹಳ್ಳಿಗಳಲ್ಲಿ ಮತಗಟ್ಟೆ ಪತ್ತೆ ಮಾಡುವುದು ಸುಲಭ. ಆದರೆ ನಗರ ಪ್ರದೇಶಗಳಲ್ಲಿ ಒಂದೇ ಬಡಾವಣೆಯಲ್ಲಿ ಎರಡು- ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದರಿಂದ ಗೊಂದಲ ಉಂಟಾಗುತ್ತದೆ. ಹೀಗಾಗಿ ಮತಗಟ್ಟೆ ಬಳಿ ಹೋಗಿ ಪರದಾಡುವ
ಮುನ್ನ, ನಿಮ್ಮ ಮತಗಟ್ಟೆ ಯಾವುದು ಎಂಬುದನ್ನು ಮೊದಲೇ ತಿಳಿದುಕೊಳ್ಳಿ.

Check Your Vote

ಬೆಂಗಳೂರು :  ಹಳ್ಳಿಗಳಲ್ಲಿ ಮತಗಟ್ಟೆ ಪತ್ತೆ ಮಾಡುವುದು ಸುಲಭ. ಆದರೆ ನಗರ ಪ್ರದೇಶಗಳಲ್ಲಿ ಒಂದೇ ಬಡಾವಣೆಯಲ್ಲಿ ಎರಡು- ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದರಿಂದ ಗೊಂದಲ ಉಂಟಾಗುತ್ತದೆ. ಹೀಗಾಗಿ ಮತಗಟ್ಟೆ ಬಳಿ ಹೋಗಿ ಪರದಾಡುವ
ಮುನ್ನ, ನಿಮ್ಮ ಮತಗಟ್ಟೆ ಯಾವುದು ಎಂಬುದನ್ನು ಮೊದಲೇ ತಿಳಿದುಕೊಳ್ಳಿ.

ಮತದಾರರ ಗುರುತಿನ ಚೀಟಿ ಸಂಖ್ಯೆ ಸಹಾಯದಿಂದ ಅದನ್ನು ಪತ್ತೆ ಮಾಡಬಹುದು.  KAEPIC  ಎಂದು ಬರೆದು ಸ್ಪೇಸ್ ಕೊಟ್ಟು ಗುರುತಿನ ಚೀಟಿ ಸಂಖ್ಯೆಯನ್ನು  9731979899 ಸಂಖ್ಯೆಗೆ ಎಸ್‌ಎಂಎಸ್ ಮಾಡಬೇಕು. ಕ್ಷಣಾರ್ಧದಲ್ಲಿ ಸಂಪೂರ್ಣ ವಿವರ ಲಭಿಸುತ್ತದೆ.

ಚುನಾವಣಾ ಆಯೋಗದ ವೆಬ್‌ಸೈಟ್  www.ceokarnataka.kar.nic.in ನಲ್ಲಿ ಇದನ್ನು ಹುಡುಕಬಹುದು. ಮತದಾರರ ಗುರುತಿನ ಚೀಟಿ ಇಲ್ಲವೆಂದರೂ ಈ ವೆಬ್‌ಸೈಟ್‌ನಲ್ಲಿ ಹೆಸರಿನ ಸಹಾಯದಿಂದ ಹುಡುಕಲು ಅವಕಾಶವಿದೆ. ಅದರ ಮುಖಪುಟದಲ್ಲೇ ‘ಎಲೆಕ್ಷನ್ ಇನ್‌ಫರ್ಮೇಷನ್ ಸಿಸ್ಟಂ’ ಇದ್ದು, ಅದನ್ನು ಬಳಸಿ ಮತಗಟ್ಟೆಯಷ್ಟೇ ಅಲ್ಲ, ಅಭ್ಯರ್ಥಿಗಳು, ಮತದಾರರ ವಿವರ, ನಕ್ಷೆಯಂತಹ ಸಮಗ್ರ ಮಾಹಿತಿ ಪಡೆಯಬಹುದು.

ಮತದಾರರ ಅನುಕೂಲಕ್ಕೆಂದೇ ಈ ಬಾರಿ ಚುನಾವಣಾ ಆಯೋಗ ಮೊಬೈಲ್ ಆ್ಯಪ್‌ವೊಂದನ್ನು ಬಿಡುಗಡೆ ಮಾಡಿದೆ. ‘ಚುನಾವಣಾ’ ಎಂಬ ಹೆಸರಿನ ಆ್ಯಪ್ ಇದಾಗಿದ್ದು, ಮತಗಟ್ಟೆ ವಿವರ ಜತೆಗೆ ಅಲ್ಲಿರುವ ಸರತಿ ಸಾಲಿನ ಮಾಹಿತಿಯನ್ನೂ ಪಡೆಯಬಹುದು.  ಮತ ಪಟ್ಟಿಯಲ್ಲಿ ಹೆಸರಿದ್ದರೆ ಚುನಾವಣಾ ಆಯೋಗ ಹಾಗೂ ರಾಜಕೀಯ ಪಕ್ಷಗಳೇ ನಿಮ್ಮ ಮನೆಗೆ ವೋಟರ್ ಸ್ಲಿಪ್ ತಲುಪಿಸುತ್ತವೆ. ಇಲ್ಲದಿದ್ದರೆ ಮತಗಟ್ಟೆ ಬಳಿಯ ರಾಜಕೀಯ ಪಕ್ಷಗಳ ಏಜೆಂಟರ ಸಹಾಯ ಪಡೆಯಬಹುದು.

ಇಂಕ್  ಹಾಕಿಸಿಕೊಳ್ಳಿ  : ಚುನಾವಣೆ ಸಿಬ್ಬಂದಿ ಬಳಿ ಇರುವ ಪುಸ್ತಕದಲ್ಲಿ ಸಹಿ ಹಾಕಿದ ಬಳಿಕ, ಪಕ್ಕದಲ್ಲೇ ಇರುವ ಎರಡನೇ ಅಧಿಕಾರಿ ನಿಮ್ಮ ಮತದಾರರ ಗುರುತಿನ ಚೀಟಿ ಅಥವಾ ಇನ್ನಿತರೆ ಗುರುತಿನ ಪುರಾವೆಯನ್ನು ಮತಪಟ್ಟಿಯಲ್ಲಿರುವ ನಿಮ್ಮ ಹೆಸರು, ಫೋಟೋ
ದೊಂದಿಗೆ ತುಲನೆ ಮಾಡಿ ನೋಡುತ್ತಾರೆ. ಮೂರನೇ ಅಧಿಕಾರಿ ನಿಮ್ಮ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚುತ್ತಾರೆ. ಬಳಿಕ ಮತ ಹಾಕಲು ಸೂಚಿಸುತ್ತಾರೆ. ನಂತರ ಮತಪೆಟ್ಟಿಗೆ ಬಳಿಗೆ ತೆರಳಿ.

ವಿವಿ ಪ್ಯಾಟ್ ಬಳಕೆ ಹೇಗೆ..? 

1998 ರಿಂದ ದೇಶದಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ)ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ರಾಜಕೀಯ ಪಕ್ಷಗಳು ಈ ಮತಯಂತ್ರಗಳ ಸಾಚಾತನದ ಬಗ್ಗೆಯೇ ಪ್ರಶ್ನೆ ಮಾಡಿದ್ದವು. ಹೀಗಾಗಿ ಅನುಮಾನ ಹೋಗಲಾಡಿಸುವ ಸಲುವಾಗಿ ವಿವಿಪ್ಯಾಟ್ ಬಳಸುವ ಪದ್ಧತಿಯನ್ನು ಆರಂಭಿಸಲಾಗಿದೆ. ‘ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್  ಟ್ರಯಲ್’ ಎಂಬುದರ ಸಂಕ್ಷಿಪ್ತ ರೂಪವೇ ವಿವಿಪ್ಯಾಟ್. ತಾವು ಅಂದುಕೊಂಡಿದ್ದ ಅಭ್ಯರ್ಥಿಗೇ ಮತ ಚಲಾವಣೆಯಾಗಿದೆಯೇ ಎಂಬುದರ ಖಾತ್ರಿಯನ್ನು ಮತದಾರರಿಗೆ ಒದಗಿಸುವ ಚಿಕ್ಕ ಪತ್ರ ಇದು. 

ಇದಕ್ಕಾಗಿ ವಿದ್ಯುನ್ಮಾನ ಮತಯಂತ್ರದ ಪಕ್ಕದಲ್ಲೇ, ಮತ್ತೊಂದು  ಯಂತ್ರ ಇರುತ್ತದೆ. ಮತಯಂತ್ರಕ್ಕೂ, ಅದಕ್ಕೂ ಸಂಪರ್ಕ ಇರುತ್ತದೆ. ಮತದಾರರು ಮತಯಂತ್ರದಲ್ಲಿ ತಮ್ಮ ಹಕ್ಕು ಚಲಾವಣೆ  ಮಾಡುತ್ತಿದ್ದಂತೆ ವಿವಿಪ್ಯಾಟ್‌ನಲ್ಲಿ ಸಣ್ಣ ಚೀಟಿಯೊಂದು ಮುದ್ರಣವಾಗುತ್ತದೆ. ಗಾಜಿನ ಪರದೆಯ ಮೂಲಕ ಅದನ್ನು ಮತದಾರರು7 ಸೆಕೆಂಡ್ ಕಾಲ ವೀಕ್ಷಿಸಬಹುದು. 2014ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಸೇರಿದಂತೆ ದೇಶದ 6 ಕ್ಷೇತ್ರಗಳಲ್ಲಿ ಈ  ವ್ಯವಸ್ಥೆ ಬಳಸಲಾಗಿತ್ತು. 2017ರ ಗೋವಾ ವಿಧಾನಸಭೆ ಚುನಾವಣೆಯಿಂದ ಪರಿಪೂರ್ಣವಾಗಿ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಡಿಸೆಂಬ ರ್‌ನಲ್ಲಿ ನಡೆದ ಗುಜರಾತ್ ಚುನಾವಣೆಯಲ್ಲೂ ಇದನ್ನು ಉಪಯೋಗಿಸಲಾಗಿತ್ತು.

ಮತಯಂತ್ರ ಬಳಸಿ ರಾಜಕೀಯ ಪಕ್ಷಗಳು ತಮಗೆ ಬೇಕಾದಂತೆ ಫಲಿತಾಂಶ ಪಡೆದುಕೊಳ್ಳುತ್ತವೆ ಎಂಬ ಅನುಮಾನವನ್ನು ಈ  ವ್ಯವಸ್ಥೆ ಹೋಗಲಾಡಿಸುತ್ತದೆ. ಚುನಾವಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶ ಕವಾಗುತ್ತದೆ. ತಾವು ಹಾಕಿದ ಮತ ತಾವು  ಯಾರಿಗೆ ಚಲಾವಣೆ ಮಾಡಬೇಕು ಎಂದಿದ್ದೇವೆಯೋ ಅವರಿಗೆ ಹೋಗಿದೆಯೇ ಎಂಬ ಖಾತ್ರಿ ಮತದಾರರಿಗೆ ಸಿಗುತ್ತದೆ. ಮತದಾರರಲ್ಲಿ ನಂಬಿಕೆಯನ್ನು ಮೂಡಿಸುತ್ತದೆ.

ಮತದಾನದ ದಿನ ನೇರ ಮತಗಟ್ಟೆಗೆ ಹೋಗುವ ಧಾವಂತ ಬೇಡ. ಮೊದಲು ವೋಟರ್ ಸ್ಲಿಪ್ ಅನ್ನು ಪಡೆದುಕೊಳ್ಳಿ. ಮತದಾರರ ವಿಳಾಸ ಹುಡುಕಿ ಚುನಾವಣಾ ಆಯೋಗವೇ ಭಾವಚಿತ್ರ ಸಹಿತ ವೋಟರ್ ಸ್ಲಿಪ್ ನೀಡುತ್ತದೆ. ಅದನ್ನು ಮರೆಯದೇ ಮತಗಟ್ಟೆಗೆ ಒಯ್ಯಿರಿ.
ಆಯೋಗ ನೀಡುವ ಸ್ಲಿಪ್ ಸಿಕ್ಕಿಲ್ಲದಿದ್ದರೂ, ರಾಜಕೀಯ ಪಕ್ಷಗಳು ಮನೆ ಬಾಗಿಲಿಗೆ ಅದೇ ಮಾದರಿ ಸ್ಲಿಪ್ ನೀಡುತ್ತವೆ.

ಅದೂ ಬಂದಿಲ್ಲವೆಂದಾದರೆ, ನಿಮ್ಮಮತದಾರರ ಗುರುತಿನ ಚೀಟಿಯನ್ನು ಮತದಾನ ಕೇಂದ್ರ ಬಳಿಗೆ ಒಯ್ಯಿರಿ. ಅಲ್ಲೇ ಪ್ರತಿ ರಾಜಕೀಯ ಪಕ್ಷಗಳೂ ಸ್ಲಿಪ್ ಒದಗಿಸುವ ವ್ಯವಸ್ಥೆ ಕಲ್ಪಿಸಿರುತ್ತವೆ.ಅಲ್ಲಿ ಸ್ಲಿಪ್ ಪಡೆದುಕೊಂಡು ಮತಗಟ್ಟೆ ಪ್ರವೇಶಿಸಿ. ಮತಗಟ್ಟೆಯಲ್ಲಿ ಸಾಲು ಇದ್ದರೆ ನಿಮ್ಮ ಸರದಿ ಬಂದಾಗ ಕೋಣೆ ಪ್ರವೇಶಿಸಿ. ಅಲ್ಲಿ ಮೂವರು ಅಧಿಕಾರಿಗಳು ಇರುತ್ತಾರೆ. ಮೊದಲನೆಯವರು ಸಹಿ ಮಾಡಿಸಿಕೊಳ್ಳುತ್ತಾರೆ. ಸಹಿ ಮಾಡಿ.

https://kannada.asianetnews.com/karnataka-assembly-election-2018/if-u-don-t-have-voter-id-you-can-use-this-ids-p8gp5l

Follow Us:
Download App:
  • android
  • ios