ಜಯನಗರ ಹಾಗೂ ಆರ್ ಆರ್ ನಗರ ಚುನಾವಣೆ ಬಾಕಿ ಉಳಿದಿದ್ದು ಶತಾಯ ಗತಾಯ ಬಿಜೆಪಿಯನ್ನು ಸೋಲಿಸಬೇಕೆಂದು ಕಾಂಗ್ರೆಸ್-ಜೆಡಿಎಸ್ ಪಣ ತೊಟ್ಟಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಉಭಯ ಪಕ್ಷಗಳು ಸಜ್ಜಾಗಿದ್ದು, ಜಯನಗರ ಹಾಗೂ ಆರ್ ಆರ್ ನಗರ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದೆ.
ಬೆಂಗಳೂರು (ಮೇ. 20): ಜಯನಗರ ಹಾಗೂ ಆರ್ ಆರ್ ನಗರ ಚುನಾವಣೆ ಬಾಕಿ ಉಳಿದಿದ್ದು ಶತಾಯ ಗತಾಯ ಬಿಜೆಪಿಯನ್ನು ಸೋಲಿಸಬೇಕೆಂದು ಕಾಂಗ್ರೆಸ್-ಜೆಡಿಎಸ್ ಪಣ ತೊಟ್ಟಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಉಭಯ ಪಕ್ಷಗಳು ಸಜ್ಜಾಗಿದ್ದು, ಜಯನಗರ ಹಾಗೂ ಆರ್ ಆರ್ ನಗರ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದೆ.
ಇತ್ತ ಬಿಜೆಪಿಗೂ ಇದು ಪ್ರತಿಷ್ಠೆಯ ಕ್ಷೇತ್ರವಾಗಿದ್ದು ಗೆಲ್ಲಲೇಬೇಕೆಂದು ತಂತ್ರ ರೂಪಿಸಿದೆ. ಜಯನಗರ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಲಿಗೆ, ಆರ್.ಆರ್.ನಗರ ಕ್ಷೇತ್ರದ ಉಸ್ತುವಾರಿಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಹೆಗಲಿಗೆ ವಹಿಸಲಾಗಿದೆ. ಇಬ್ಬರೂ ಕೇಂದ್ರ ಸಚಿವರುಗಳ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ.
