ಮೈಸೂರು: ಮನೆ ಮನೆ ಪ್ರಚಾರದ ವೇಳೆ ಮಿತಿಗಿಂತ ಜಾಸ್ತಿ ಜನರನ್ನು ಸೇರಿಸಿ ಪ್ರಚಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. 

ಚುನಾವಣೆ  ಮುನ್ನಾದಿನ ಮನೆಮನೆ ಪ್ರಚಾರಕ್ಕಷ್ಟೇ ಅವಕಾಶವಿದೆ. ಅಲ್ಲದೆ, 10 ಕ್ಕಿಂತ ಹೆಚ್ಚಿನ ಜನರನ್ನು ಸೇರಿಸಲು ಅವಕಾಶ ಇಲ್ಲ.ಆದರೆ, ಸಿಎಂ ಟಿ.ನರಸೀಪುರ ಮುಖ್ಯರಸ್ತೆಯ ಆಲನಹಳ್ಳಿಯಲ್ಲಿ 50ಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ಮತಯಾಚಿಸಿದ್ದಾರೆ.

ಈ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ.